Wednesday, September 10, 2025

FOOD | ಮಂಗಳೂರು ಸೌತೆಕಾಯಿ ಚಟ್ನಿ: ಬಿಸಿ ಅನ್ನಕ್ಕೆ ಅದ್ಭುತ ರುಚಿ ಕೊಡೋದು ಗ್ಯಾರಂಟಿ!

ಚಟ್ನಿಗಳನ್ನು ಆಹಾರದೊಂದಿಗೆ ಸೇವಿಸುವ ಅಭ್ಯಾಸ ಭಾರತೀಯ ಮನೆಯಲ್ಲಿಯೇ ಹೆಚ್ಚು ಕಂಡುಬರುತ್ತದೆ. ಮಂಗಳೂರು ಸಾಂಬಾರ್ ಸೌತೆಕಾಯಿ ಚಟ್ನಿ ಕೂಡ ಅದರಲ್ಲೊಂದು ಪ್ರಸಿದ್ಧ ಚಟ್ನಿ. ಬಿಸಿ ಅನ್ನದ ಜೊತೆ ಸೇವಿಸಿದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತೆ.

ಅಗತ್ಯ ಪದಾರ್ಥಗಳು
ಸಾಂಬಾರ್ ಸೌತೆಕಾಯಿ,
ಹಸಿಮೆಣಸಿನಕಾಯಿ,
ಕೊತ್ತಂಬರಿ,
ಹುಣಸೆಹಣ್ಣು,
ಎಣ್ಣೆ,
ಜೀರಿಗೆ,
ಮೆಂತ್ಯೆ,
ಸಾಸಿವೆ,
ಬಿಳಿ ಎಳ್ಳು,
ಅರಿಶಿನ ಮತ್ತು ಉಪ್ಪು

ತಯಾರಿಕೆಯ ವಿಧಾನ

ಮೊದಲು ಸಾಂಬಾರ್ ಸೌತೆಕಾಯಿ ಹಾಗು ಹಸಿಮೆಣಸಿನಕಾಯಿಯನ್ನು ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿಯಾದ ಮೇಲೆ ಜೀರಿಗೆ, ಮೆಂತ್ಯೆ, ಸಾಸಿವೆ ಹಾಕಿ ಹುರಿಯಿರಿ. ನಂತರ ಹಸಿಮೆಣಸಿನಕಾಯಿಯನ್ನು ಸೇರಿಸಿ, ಕೊತ್ತಂಬರಿ ಸೊಪ್ಪು ಮತ್ತು ಬಿಳಿ ಎಳ್ಳು ಸೇರಿಸಿ ಹುರಿಯಿರಿ. ಇದರಲ್ಲಿ ಅರಿಶಿನ ಮತ್ತು ನೆನೆಸಿದ ಹುಣಸೆಹಣ್ಣು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಮಿಕ್ಸಿಯಲ್ಲಿ ಈ ಮಿಶ್ರಣ ರುಬ್ಬಿ, ನಂತರ ಸಾಂಬಾರ್ ಸೌತೆಕಾಯಿ ತುಂಡುಗಳನ್ನು ಸೇರಿಸಿ ಮೃದುವಾಗಿ ರುಬ್ಬಿಕೊಳ್ಳಿ.

ಈಗ ಒಗ್ಗರಣೆಗಾಗಿ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವು ಎಲೆಗಳು ಮತ್ತು ಬೆಳ್ಳುಳ್ಳಿ ಎಸಳನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ. ಹುರಿದ ಒಗ್ಗರಣೆಯಲ್ಲಿ ತಯಾರಿಸಿದ ಚಟ್ನಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನೂ ಓದಿ