September 14, 2026
Monday, September 14, 2026
spot_img

ನಿಮ್ಮ ಮನೆಯಲ್ಲಿ ನೆಗೆಟಿವ್‌ ಎನರ್ಜಿ ಹೆಚ್ಚಾಗಿದೆ ಅಂದ್ರೆ ಈ ಲಕ್ಷಣಗಳು ಕಾಣಿಸುತ್ತವೆ, ನಿರ್ಲಕ್ಷಿಸಬೇಡಿ!

ಎಲ್ಲವೂ ಚೆನ್ನಾಗಿದ್ದ ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಸಮಸ್ಯೆಗಳು ಬರುತ್ತವೆ. ಮನೆಯಲ್ಲಿ ಮನಸ್ತಾಪ ಬಾರದಂತೆ ಎಷ್ಟು ಪ್ರಯತ್ನಪಟ್ಟರೂ ಸಣ್ಣ ಪುಟ್ಟ ಜಗಳಗಳು ಆಗುತ್ತವೆ. ಈ ರೀತಿ ಆದಾಗ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮನೆಯಲ್ಲಿ ನೆಗೆಟಿವ್‌ ಎನರ್ಜಿ ಇರಬಹುದು. ದೆವ್ವ ಭೂತದ ಕಥೆಯಲ್ಲಿ ಬರೀ ಎನರ್ಜಿಯ ಬಗ್ಗೆ ಹೇಳ್ತಿದ್ದೀವಿ. ಮನೆಯಲ್ಲಿ ನೆಗೆಟಿವ್‌ ಎನರ್ಜಿ ಇದ್ದರೆ ಹೀಗೆಲ್ಲಾ ಆಗುತ್ತದೆ..

ಯಾವಾಗಲೂ ಮಾನಸಿಕವಾದ ಟೆನ್ಷನ್‌ ಇದ್ದೇ ಇರುತ್ತದೆ. ಆಗಾಗ ಹೀಟೆಡ್‌ ಆರ್ಗ್ಯುಮೆಂಟ್ಸ್‌, ಕಿರಿಕಿರಿ, ಕುಟುಂಬದವರ ಮಧ್ಯೆ ಜಗಳ ನಡೆಯುತ್ತಲೇ ಇರುತ್ತದೆ.

ಏನೂ ಕೆಲಸ ಮಾಡದೇ ಇದ್ರು ಸುಸ್ತು, ಯಾವುದಕ್ಕೂ ಎನರ್ಜಿ ಇಲ್ಲ. ಇದನ್ನು ಬೇರೆಯವರಿಗೆ ಅರ್ಥ ಮಾಡಿಸೋಕೂ ಆಗೋದಿಲ್ಲ. ಆದರೆ ಮನೆಯಿಂದ ಹೊರಗೆ ಹೋದಾಗ ಇದ್ಯಾವುದೂ ಕಾಡುವುದಿಲ್ಲ.

ಸರಿಯಾಗಿ ನಿದ್ದೆ ಮಾಡದೇ ಇರುವುದು, ನಿದ್ದೆಯೇ ಬಾರದಿರುವುದು, ಕೆಟ್ಟ ಕನಸುಗಳು ನಿತ್ಯವೂ ಬೀಳುವುದು.

ಎಷ್ಟೇ ಪ್ರೀತಿಯಿಂದ ನೋಡಿಕೊಂಡರೂ ಗಿಡಗಳು ಬಾಡುವುದು, ಸಾಕು ಪ್ರಾಣಿಗಳಿಗೆ ಅನಾರೋಗ್ಯ ಕಾಡುವುದು, ಮನೆಯಲ್ಲಿ ಕೆಟ್ಟ ವಾಸನೆ, ಲೈಟ್‌ ಹಾಳಾಗುವುದು, ವಸ್ತುಗಳು ಒಡೆದುಹೋಗುತ್ತವೆ.

ಯಾವುದೇ ವಿಚಾರದಲ್ಲಿ ಏಳಿಗೆ ಆಗೋದಿಲ್ಲ. ಕೆಲಸ ನಿಂತಲ್ಲೇ ನಿಲ್ಲುತ್ತದೆ. ಬರುವ ಹಣ ಬರುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !