September 27, 2026
Sunday, September 27, 2026
spot_img

SNACKS| ಮೈದಾಕ್ಕೆ ಹೇಳಿ ಬೈ-ಬೈ: ಕೇವಲ 20 ನಿಮಿಷದಲ್ಲಿ ಮಾಡಿ ಹೆಲ್ತಿ ಗೋಧಿ ನಿಪ್ಪಟ್ಟು!

ಗರಿಗರಿಯಾದ ಮತ್ತು ಆರೋಗ್ಯಕರವಾದ ಗೋಧಿ ಹಿಟ್ಟಿನ ನಿಪ್ಪಟ್ಟು ಮಾಡುವ ಸುಲಭ ವಿಧಾನ ಇಲ್ಲಿದೆ. ಮೈದಾ ಬಳಸದೆ ಕೇವಲ ಗೋಧಿ ಹಿಟ್ಟಿನಿಂದಲೇ ಬೇಕರಿ ಶೈಲಿಯ ನಿಪ್ಪಟ್ಟನ್ನು ಮನೆಯಲ್ಲೇ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು

ಚಿರೋಟಿ ರವೆ

ಅಕ್ಕಿ ಹಿಟ್ಟು

ಕಡಲೆಕಾಯಿ ಬೀಜ

ಹುರಿಗಡಲೆ

ಬಿಳಿ ಎಳ್ಳು

ಅಚ್ಚ ಖಾರದ ಪುಡಿ

ಕರಿಬೇವು

ಇಂಗು

ಎಣ್ಣೆ ಅಥವಾ ಬೆಣ್ಣೆ

 ಉಪ್ಪು

ಮಾಡುವ ವಿಧಾನ:

 ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟು, ಕುಟ್ಟಿದ ಕಡಲೆಕಾಯಿ ಬೀಜ, ಪುಟಾಣಿ ಪುಡಿ, ಬಿಳಿ ಎಳ್ಳು, ಖಾರದ ಪುಡಿ, ಇಂಗು, ಕತ್ತರಿಸಿದ ಕರಿಬೇವು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಣ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ 2 ಚಮಚ ಬಿಸಿಬಿಸಿ ಎಣ್ಣೆ ಅಥವಾ ಕರಗಿಸಿದ ಬೆಣ್ಣೆಯನ್ನು ಹಾಕಿ. ಹಿಟ್ಟನ್ನು ಕೈಯಿಂದ ಚೆನ್ನಾಗಿ ಕಲಸಿ. ಹಿಟ್ಟನ್ನು ಕೈಯಲ್ಲಿ ಹಿಡಿದರೆ ಉಂಡೆ ಕಟ್ಟುವಂತಿರಬೇಕು. ಈಗ ಸ್ವಲ್ಪ ಸ್ವಲ್ಪವೇ ನೀರನ್ನು ಚಿಮುಕಿಸುತ್ತಾ, ಪೂರಿ ಹಿಟ್ಟಿಗಿಂತಲೂ ಗಟ್ಟಿಯಾಗಿ ಹಿಟ್ಟನ್ನು ನಾದಿಕೊಳ್ಳಬೇಕು. ಹಿಟ್ಟು ಮೃದುವಾಗಬಾರದು, ಗಟ್ಟಿಯಾಗಿದ್ದರೆ ನಿಪ್ಪಟ್ಟು ಎಣ್ಣೆ ಕುಡಿಯುವುದಿಲ್ಲ.

ನಂತರ ಹಿಟ್ಟಿನಿಂದ ಸಣ್ಣ ಸಣ್ಣ ನಿಪ್ಪಟ್ಟಿನ ಉಂಡೆಗಳನ್ನು ಮಾಡಿಕೊಂಡು, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಬಟರ್ ಪೇಪರ್‌ಗೆ ಸ್ವಲ್ಪ ಎಣ್ಣೆ ಸವರಿ, ಅದರ ಮೇಲೆ ಉಂಡೆಯನ್ನು ಇಟ್ಟು ಕೈಯಿಂದ ತೆಳುವಾಗಿ ಲಟ್ಟಿಸಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಎಣ್ಣೆ ಕಾದ ನಂತರ ತಟ್ಟಿದ ನಿಪ್ಪಟ್ಟುಗಳನ್ನು ಹಾಕಿ. ಉರಿಯನ್ನು ಮಧ್ಯಮದಲ್ಲೇ ಇಟ್ಟುಕೊಂಡು, ಎರಡೂ ಕಡೆ ತಿರುಗಿಸಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ರುಚಿಕರವಾದ ಗೋಧಿ ಹಿಟ್ಟಿನ ನಿಪ್ಪಟ್ಟು ಸವಿಯಲು ಸಿದ್ಧ.

Must Read