ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಮರುದಿನವೇ ಭಾರತೀಯ ಭದ್ರತಾ ಪಡೆಗಳು ಮತ್ತು ಸ್ಥಳೀಯ ಆಡಳಿತವು ಉಗ್ರರ ವಿರುದ್ಧ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಸಕ್ರಿಯ ಭಯೋತ್ಪಾದಕರ ಕುಟುಂಬಕ್ಕೆ ಸೇರಿದ ವಸತಿ ಮನೆಗಳನ್ನು ಅಧಿಕಾರಿಗಳು ಗುರುವಾರ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ.
ಬುಲ್ಡೋಜರ್ ಕಾರ್ಯಾಚರಣೆ:
ಭಯೋತ್ಪಾದಕ ಚಟುವಟಿಕೆಗಳಿಗೆ ಆಶ್ರಯ ನೀಡಲು ಮತ್ತು ಸಂಚು ರೂಪಿಸಲು ಈ ಮನೆಗಳನ್ನು ಬಳಸಲಾಗುತ್ತಿತ್ತು ಎಂಬ ದೃಢ ಮಾಹಿತಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅನಂತನಾಗ್ ದಾಳಿಯ ನಂತರ ಇಡೀ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಉಗ್ರರ ಅಡಗುದಾಣಗಳನ್ನು ಪತ್ತೆಹಚ್ಚಲು ಭಾರಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
2000 ಕ್ಕೂ ಹೆಚ್ಚು ಶಂಕಿತರು ವಶಕ್ಕೆ
ಭಯೋತ್ಪಾದನೆಗೆ ಆಶ್ರಯ ಮತ್ತು ಹಣಕಾಸಿನ ನೆರವು ನೀಡುವ ಓವರ್ ಗ್ರೌಂಡ್ ವರ್ಕರ್ಸ್ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಕಾಶ್ಮೀರಾದ್ಯಂತ ನಡುರಾತ್ರಿ ಭಾರಿ ದಾಳಿಗಳನ್ನು ನಡೆಸಲಾಗಿದೆ . ಒಟ್ಟು 2000 ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ;
ಕೇಂದ್ರದ ಕಠಿಣ ಸಂದೇಶ:
ಭಯೋತ್ಪಾದನೆಗೆ ಮತ್ತು ಉಗ್ರರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಥವಾ ಧ್ವಂಸಗೊಳಿಸಲಾಗುವುದು ಎಂದು ಆಡಳಿತ ಮಂಡಳಿ ಕಠಿಣ ಎಚ್ಚರಿಕೆ ನೀಡಿದೆ.



