July 24, 2026
Friday, July 24, 2026
spot_img

ಕೂದಲು ಉದುರುವ ಸಮಸ್ಯೆ ಇರುವವರು ನಿತ್ಯವೂ ಕುಂಬಳಕಾಯಿ ಬೀಜ ಸೇವಿಸಿ, ಯಾಕೆ ಗೊತ್ತಾ?

ಏನು ಮಾಡಿದ್ರೂ ಕೂದಲು ಉದುರೋದು ನಿಲ್ತಾ ಇಲ್ಲ ಅಂದ್ರೆ ಒಂದು ಬಾರಿ ಪಂಪ್ಕಿನ್‌ ಸೀಡ್‌ ಆಯಿಲ್‌ ಮಾತ್ರೆಗಳು ಅಥವಾ ಕುಂಬಳಕಾಯಿ ಬೀಜಗಳನ್ನು ತಿನ್ನುವ ಅಭ್ಯಾಸ ಮಾಡಿ. ಇದು ನಿಮ್ಮ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲು ತೆಳು ಆಗುವುದನ್ನು ತಪ್ಪಿಸುತ್ತದೆ.

ಇದರಲ್ಲಿ ಫೈಟೋಸ್ಟೆರೊಲ್ಸ್‌, ಝಿಂಕ್‌, ಒಮೆಗಾ ಇರುವುದರಿಂದ ಕೂದಲಿನ ಬುಡ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಫೈಟೋಸ್ಟೆರೊಲ್ಸ್‌ ನೈಸರ್ಗಿಕವಾಗಿ ಬೋಳುತಲೆ ಆಗುವುದನ್ನು ತಪ್ಪಿಸುತ್ತದೆ.

ಇನ್ನು ಇದರಲ್ಲಿರುವ ಫ್ಯಾಟಿ ಆಸಿಡ್ಸ್‌ ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ. ಬುಡವನ್ನು ಹೈಡ್ರೇಟ್‌ ಆಗಿ ಇಡುತ್ತದೆ.

ಝಿಂಕ್‌, ಮೆಗ್ನಿಸಿಯಂ ಹಾಗೂ ವಿಟಮಿನ್‌ ಇ ಒತ್ತಡದಿಂದ ಕೂದಲು ಉದುರುವುದನ್ನು ತಪ್ಪಿಸುತ್ತದೆ. ಕೂದಲಿನ ಬೆಳವಣಿಗೆಗೆ ಆರೋಗ್ಯಕರ ವಾತಾವರಣ ನೀಡುತ್ತದೆ.

ಬಳಸೋದು ಹೇಗೆ?
ಈ ಕ್ಯಾಪ್ಸುಲ್‌ಗಳ ಎಣ್ಣೆಯನ್ನು ಕೂದಲಿಗೆ ಹಚ್ಚಬಹುದು. ಆದರೆ ಇದರ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ಸೀಡ್ಸ್‌ ತಿನ್ನುವುದು ಬೆಟರ್‌. ದಿನಕ್ಕೆ 400 ರಿಂದ 500 ಎಮ್‌ಜಿಯಷ್ಟು ಸಾಕಾಗುತ್ತದೆ.

ತಲೆಗೆ ಎಣ್ಣೆಯಂತೆ ಹಚ್ಚುವುದಾದರೆ ಸ್ಕಾಲ್ಪ್‌ಗೆ ಹಚ್ಚಿ ಐದು ನಿಮಿಷ ಮಸಾಜ್‌ ಮಾಡಿ ರಾತ್ರಿಯಿಡೀ ಬಿಡಿ ನಂತರ ತಲೆಸ್ನಾನ ಮಾಡಿ. ವಾರಕ್ಕೆ ಮೂರು ಬಾರಿ ಮಾಡುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !