July 24, 2026
Friday, July 24, 2026
spot_img

ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಗೃಹಿಣಿ ಆತ್ಮ*ಹತ್ಯೆ? ಪತಿ, ಮಾವನ ವಿರುದ್ಧ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಜಗಳಗಳು, ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ದೂಪನಹಳ್ಳಿಯ ನಿವಾಸಿ ಪ್ರೇರಣ ಮೃತರು. ಒಂದು ವರ್ಷದ ಹಿಂದಷ್ಟೇ ವಿನಯ್‌ ಕುಮಾರ್‌ ಎನ್ನುವವರನ್ನು ಪ್ರೇರಣಾ ಮದುವೆಯಾಗಿದ್ದರು. ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ವಿನಯ್‌ ಹಾಗೂ ಆತನ ತಂದೆಯ ವಿರುದ್ಧ ದೂರು ದಾಖಲಾಗಿದೆ.

ಕಾಲೇಜಿಗೆ ತೆರಳಿ ಬಿಎಸ್‌ಸಿ ಪದವಿ ಓದುತ್ತಿದ್ದ ಪ್ರೇರಣಾಗೆ ಮಾನಸಿಕ ನೆಮ್ಮದಿಯೇ ಇರಲಿಲ್ಲ. ಪತಿ ಹಾಗೂ ಮಾವ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ಸದ್ಯ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಮಾವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !