September 27, 2026
Sunday, September 27, 2026
spot_img

SNACKS | ಸಂಜೆಯ ಸ್ನಾಕ್ಸ್‌ಗೆ ಸೂಪರ್ ಕಾಂಬಿನೇಷನ್: ಚೀಸೀ ಆನಿಯನ್ ಸ್ಯಾಂಡ್‌ವಿಚ್ ಟ್ರೈ ಮಾಡಿ

ಸಂಜೆಯಾಗ್ತಾ ಇದ್ದಂತೆ ಏನಾದ್ರೂ ಬಿಸಿಬಿಸಿಯಾಗಿ, ಕ್ರಿಸ್ಪಿಯಾಗಿ ತಿನ್ನಬೇಕು ಅನ್ಸೋದು ಸಹಜ. ಅಂತವರಿಗಾಗಿ ಇಲ್ಲಿದೆ ಒಂದು ಬೆಸ್ಟ್ ಆಪ್ಷನ್ ಚೀಸೀ ಆನಿಯನ್ ಸ್ಯಾಂಡ್‌ವಿಚ್. ಈರುಳ್ಳಿಯ ಕ್ರಂಚಿ ರುಚಿ ಮತ್ತು ಚೀಸ್‌ ನಿಜಕ್ಕೂ ಅದ್ಭುತ ಕಾಂಬಿನೇಷನ್.

ಬೇಕಾಗುವ ಸಾಮಗ್ರಿಗಳು

 ಬ್ರೆಡ್ ಸ್ಲೈಸ್‌ಗಳು

 ಈರುಳ್ಳಿ

ಚೀಸ್ ಸ್ಲೈಸ್ ಅಥವಾ ತುರಿದ ಮೊಜರೆಲ್ಲಾ ಚೀಸ್

ಹಸಿ ಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಕಾಳುಮೆಣಸಿನ ಪುಡಿ

ಬೆಣ್ಣೆ ಅಥವಾ ತುಪ್ಪ

ಉಪ್ಪು

ತಯಾರಿಸುವ ವಿಧಾನ

ಒಂದು ಬೌಲ್‌ನಲ್ಲಿ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬ್ರೆಡ್ ಸ್ಲೈಸ್‌ನ ಒಂದು ಬದಿಗೆ ಸ್ವಲ್ಪ ಬೆಣ್ಣೆ ಅಥವಾ ಗ್ರೀನ್ ಚಟ್ನಿ ಹಚ್ಚಿ. ಅದರ ಮೇಲೆ ಸಿದ್ಧಪಡಿಸಿದ ಈರುಳ್ಳಿ ಮಿಶ್ರಣವನ್ನು ಹರಡಿ. ಅದರ ಮೇಲ್ಭಾಗದಲ್ಲಿ ಚೀಸ್ ಸ್ಲೈಸ್ ಅಥವಾ ತುರಿದ ಚೀಸ್ ಅನ್ನು ಹಾಕಿ, ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ ತವಾ ಅಥವಾ ಸ್ಯಾಂಡ್‌ವಿಚ್ ಮೇಕರ್‌ಗೆ ಸ್ವಲ್ಪ ಬೆಣ್ಣೆ ಹಾಕಿ, ಬ್ರೆಡ್‌ನ ಎರಡೂ ಬದಿಗಳು ಚಿನ್ನದ ಬಣ್ಣಕ್ಕೆ ಬರುವವರೆಗೆ ಮತ್ತು ಚೀಸ್ ಕರಗುವವರೆಗೆ ಮಧ್ಯಮ ಉರಿಯಲ್ಲಿ ಕ್ರಿಸ್ಪಿಯಾಗಿ ಬೇಯಿಸಿ. ಬಿಸಿಬಿಸಿಯಾದ ಚೀಸೀ ಆನಿಯನ್ ಸ್ಯಾಂಡ್‌ವಿಚ್  ಸಿದ್ಧ.

Must Read