July 24, 2026
Friday, July 24, 2026
spot_img

ಏಷ್ಯನ್ ಗೇಮ್ಸ್ 2026 ಕ್ರಿಕೆಟ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಕಾದಾಟ ಫೈನಲ್‌ನಲ್ಲಷ್ಟೇ ಸಾಧ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಕೂಟದ ವೇಳಾಪಟ್ಟಿ ಹಾಗೂ ಡ್ರಾ ಅಧಿಕೃತವಾಗಿ ಹೊರಬಿದ್ದಿದೆ. ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ನಾಲ್ಕನೇ ಬಾರಿಗೆ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲಾಗಿದ್ದು, ಪಂದ್ಯಗಳು ಅಂತಾರಾಷ್ಟ್ರೀಯ T20 ಸ್ವರೂಪದಲ್ಲಿ ಜರುಗಲಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿರುವ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿವೆ.

ಭಾರತ vs ಪಾಕಿಸ್ತಾನ: ಫೈನಲ್‌ನಲ್ಲಷ್ಟೇ ಮುಖಾಮುಖಿ?

ಟೂರ್ನಿಯ ಡ್ರಾ ಪ್ರಕಾರ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಭಿನ್ನ ಗುಂಪುಗಳಲ್ಲಿದ್ದವು. ಹೀಗಾಗಿ, ಈ ಎರಡೂ ಬದ್ಧ ವೈರಿಗಳು ಫೈನಲ್ ತಲುಪಿದರೆ ಮಾತ್ರವೇ ಪರಸ್ಪರ ಮುಖಾಮುಖಿಯಾಗುವ ರೋಚಕ ಸಾಧ್ಯತೆಯಿದೆ.

ಪುರುಷರ ವಿಭಾಗ: ನೇರ ಕ್ವಾರ್ಟರ್ ಫೈನಲ್ ಪ್ರವೇಶ

ಪುರುಷರ T20 ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ. ಶ್ರೇಷ್ಠ ಶ್ರೇಯಾಂಕದ ಆಧಾರದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ತಲುಪಿವೆ. ಬಾಕಿ 4 ಸ್ಥಾನಗಳಿಗಾಗಿ 6 ತಂಡಗಳ ನಡುವೆ ಅರ್ಹತಾ ಸುತ್ತು ನಡೆಯಲಿದೆ.

  • ಗುಂಪು ಎ: ಅಫ್ಘಾನಿಸ್ತಾನ, ಜಪಾನ್, ನೇಪಾಳ
  • ಗುಂಪು ಬಿ: ಹಾಂಗ್ ಕಾಂಗ್, ಚೀನಾ, ಮಲೇಷ್ಯಾ, ಓಮನ್

(ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿವೆ)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !