September 30, 2026
Wednesday, September 30, 2026
spot_img

NEET ಪೇಪರ್ ಸೋರಿಕೆ ಕುರಿತು ಪಿಎಂ ನೇರ ಮಾತು: ಸೋಷಿಯಲ್ ಮೀಡಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಂಚಿಕೊಂಡ ‘ಜೆನ್-ಝಡ್’ ಶೈಲಿಯ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಧಮಾಕಾ ಸೃಷ್ಟಿಸಿದೆ. ವಿದ್ಯಾರ್ಥಿಗಳನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಈ ವಿಡಿಯೋ ಪ್ರಕಟವಾದ ಕೆಲವೇ ಗಂಟೆಗಳಲ್ಲಿ, ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಸರಿಸುಮಾರು 11 ಲಕ್ಷ (1.1 ಮಿಲಿಯನ್) ಹೊಸ ಅನುಯಾಯಿಗಳು ಸೇರ್ಪಡೆಯಾಗಿದ್ದಾರೆ.

102 ಮಿಲಿಯನ್ ಗಡಿ ದಾಟಿದ ಫಾಲೋವರ್ಸ್

ಯಾವುದೇ ಅಧಿಕೃತ ಸೆಟಪ್ ಇಲ್ಲದೆ ಪ್ರಧಾನಿಯವರು ಸ್ವತಃ ಮೊಬೈಲ್ ಮೂಲಕ ರೆಕಾರ್ಡ್ ಮಾಡಿ ಹಂಚಿಕೊಂಡ ಈ ವಿಡಿಯೋ ಅಪ್‌ಲೋಡ್ ಆಗುವ ಮೊದಲು ಅವರ ಫಾಲೋವರ್ಸ್ ಸಂಖ್ಯೆ 101 ಮಿಲಿಯನ್ ಇತ್ತು. ಆದರೆ, ಈ ವಿಡಿಯೋದ ಯಶಸ್ಸಿನ ಬಳಿಕ ಅವರ ಖಾತೆಯ ಫಾಲೋವರ್ಸ್ ಸಂಖ್ಯೆ ಕ್ಷಣಮಾತ್ರದಲ್ಲಿ 102 ಮಿಲಿಯನ್ ದಾಟಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಮೋದಿಯವರಿಗಿರುವ ಅಪ್ರತಿಮ ಜನಪ್ರಿಯತೆಯನ್ನು ಸಾಬೀತುಪಡಿಸಿದೆ.

ಪೇಪರ್ ಲೀಕ್ ವಿರುದ್ಧ ಕಠಿಣ ಭರವಸೆ

ದೇಶಾದ್ಯಂತ ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಮುಗಿಲೆತ್ತರಕ್ಕೇರಿರುವ ಸಂದರ್ಭದಲ್ಲೇ ಪಿಎಂ ಮೋದಿ ಈ ಹೆಜ್ಜೆ ಇಟ್ಟಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ಜಾರಿ ಮತ್ತು ಶೀಘ್ರ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಮಾಡುವುದಾಗಿ ಈ ವೀಡಿಯೊದಲ್ಲಿ ಪ್ರಧಾನಿ ಭರವಸೆ ನೀಡಿದ್ದಾರೆ. ಯುವಸಮುದಾಯದ ಮನಗೆದ್ದ ಈ ಜಾಗೃತಿ ಸಂದೇಶವು ಕೋಟ್ಯಂತರ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.

Must Read