September 27, 2026
Sunday, September 27, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 38 | ಇನ್‌ಸ್ಟಂಟ್ ರವೆ ದೋಸೆ ರೆಸಿಪಿ: ಬೆಳಗಿನ ತಿಂಡಿಗೆ ಬೆಸ್ಟ್ ಚಾಯ್ಸ್!

ಬೆಳಗ್ಗೆ ಎದ್ದ ತಕ್ಷಣ ಇವತ್ತು ತಿಂಡಿಗೆ ಏನು ಮಾಡುವುದು ಎಂಬ ಚಿಂತೆ ಎಲ್ಲರನ್ನೂ ಕಾಡುವುದು ಸಹಜ. ಅದರಲ್ಲೂ ದೋಸೆ ಮಾಡಬೇಕೆಂದರೆ ಹಿಂದಿನ ದಿನವೇ ಅಕ್ಕಿ, ಬೇಳೆ ನೆನೆಸಿ, ರುಬ್ಬಿ ಇಡಬೇಕಾಗುತ್ತದೆ. ಆದರೆ ಯಾವುದೇ ಪೂರ್ವ ತಯಾರಿ ಇಲ್ಲದೆ, ಕೇವಲ 10 ರಿಂದ 15 ನಿಮಿಷಗಳಲ್ಲಿ ಗರಿಗರಿಯಾದ ರವೆ ದೋಸೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಚಿರೋಟಿ ರವೆ ಅಥವಾ ಉಪ್ಪಿಟ್ಟು ರವೆ

ಅಕ್ಕಿ ಹಿಟ್ಟು

ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು

ಮೊಸರು

ನೀರು

ಜೀರಿಗೆ

ಕಾಳುಮೆಣಸಿನ ಪುಡಿ

ಹಸಿ ಮೆಣಸಿನಕಾಯಿ

ಈರುಳ್ಳಿ

ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು

ಶುಂಠಿ ತುರಿ

ಉಪ್ಪು

ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಉಪ್ಪು, ಜೀರಿಗೆ, ಕಾಳುಮೆಣಸು, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಒಟ್ಟಿಗೆ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಮೊಸರು ಮತ್ತು ನೀರನ್ನು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ. ಹಿಟ್ಟಿನ ಹದವು ಮಜ್ಜಿಗೆಯಂತೆ ತುಂಬಾ ತೆಳ್ಳಗೆಇರಬೇಕು. ನಂತರ ಹಿಟ್ಟನ್ನು ಮುಚ್ಚಿ 10-15 ನಿಮಿಷಗಳ ಕಾಲ ಪಕ್ಕಕ್ಕೆ ಇಡಬೇಕು. ಬಳಿಕ ದೋಸೆ ಹಂಚನ್ನು ಗ್ಯಾಸ್ ಮೇಲೆ ಇಟ್ಟು ತುಂಬಾ ಚೆನ್ನಾಗಿ ಬಿಸಿ ಮಾಡಿ. ದೋಸೆ ಹಾಕುವ ಮುನ್ನ ಹಿಟ್ಟನ್ನು ತಳದಿಂದ ಚೆನ್ನಾಗಿ ಕೈಯಾಡಿಸಿ. ನಂತರ ಒಂದು ಲೋಟ ಅಥವಾ ದೊಡ್ಡ ಸೌಟಿನಿಂದ ಹಿಟ್ಟನ್ನು ತವಾದ ಹೊರಭಾಗದಿಂದ ಶುರು ಮಾಡಿ ಒಳಗಿನ ಕಡೆಗೆ ತೆಳ್ಳಗೆ ಚಿಮುಕಿಸಿದಂತೆ ಸುರಿಯಬೇಕು.

ನಿಮಗೆ ಈರುಳ್ಳಿ ರವೆ ದೋಸೆ ಬೇಕಿದ್ದರೆ, ದೋಸೆ ಹಿಟ್ಟು ಹಾಕುವ ಮುನ್ನ ಹಂಚಿನ ಮೇಲೆ ಸ್ವಲ್ಪ ಹೆಚ್ಚಿದ ಈರುಳ್ಳಿ ಉದುರಿಸಿ, ನಂತರ ಅದರ ಮೇಲೆ ಹಿಟ್ಟು ಸುರಿಯಬಹುದು. ದೋಸೆಯ ಸುತ್ತಲೂ ಮತ್ತು ಮಧ್ಯದಲ್ಲಿ 1-2 ಚಮಚ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಬೇಯಿಸಿದರೆ, ಬಿಸಿಬಿಸಿಯಾದ ರವೆ ದೋಸೆ ಸಿದ್ಧ.

Must Read