October 9, 2026
Friday, October 9, 2026
spot_img

‘ಹೆದರಿದವನು ಸತ್ತಂತೆ’: ವಿದ್ಯಾರ್ಥಿಗಳ ಪರ ನಿಂತ ನಟ ಸಲ್ಮಾನ್ ಖಾನ್ ಈ ಪೋಸ್ಟ್‌ಗೆ ಏನರ್ಥ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್ ಒಂದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದ ಸಲ್ಮಾನ್ ಖಾನ್, ಈಗ ಇದ್ದಕ್ಕಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಜೋ ಡರ್ ಗಯಾ, ವೋ ಮರ್ ಗಯಾ” (ಯಾರು ಹೆದರುತ್ತಾರೋ, ಅವರು ಸತ್ತಂತೆ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ನೀಡಿದ್ದ ಸಲ್ಲು:

ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿರುವ ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿಗಳ ಹೋರಾಟ ಹಾಗೂ ದೆಹಲಿಯ ಜಂತರ್ ಮಂತರ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು ಎನ್ನಲಾಗಿದೆ. ಯುವ ಪೀಳಿಗೆಯ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಗೂಡಿಸಿದ್ದ ಸಲ್ಮಾನ್ ನಡೆ ರಾಜಕೀಯ ಮತ್ತು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.

ಇದನ್ನೂ ಓದಿ:

ಸಿನಿಮಾ ಪ್ರಚಾರವೋ, ಎಚ್ಚರಿಕೆಯ ಸಂದೇಶವೋ?

ಸಲ್ಮಾನ್ ಖಾನ್ ಸದ್ಯ ಹಂಚಿಕೊಂಡಿರುವ “ಜೋ ಡರ್ ಗಯಾ, ವೋ ಮರ್ ಗಯಾ” ಎಂಬ ಸಾಲುಗಳು ಬಾಲಿವುಡ್‌ನ ಪ್ರಸಿದ್ಧ ಡೈಲಾಗ್ ಆಗಿದ್ದರೂ, ಸದ್ಯದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿ ಇದಕ್ಕೆ ಹಲವು ಅರ್ಥಗಳನ್ನು ಕಲ್ಪಿಸಲಾಗುತ್ತಿದೆ. ಕೆಲವರು ಇದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಸಲ್ಮಾನ್ ನೀಡಿರುವ ಸಂದೇಶ ಎಂದು ಕೊಂಡಾಡುತ್ತಿದ್ದರೆ, ಇನ್ನೂ ಕೆಲವರು ಇದು ಅವರ ಮುಂಬರುವ ಹೊಸ ಚಿತ್ರದ ಪ್ರಚಾರದ ತಂತ್ರವಿರಬಹುದು ಎಂದು ಅಂದಾಜಿಸಿದ್ದಾರೆ. ಸದ್ಯ ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Must Read