July 25, 2026
Saturday, July 25, 2026
spot_img

Must-Try | ಸಿಂಪಲ್ ಅನ್ನ-ಸಾರಿನ ರುಚಿಯನ್ನೂ ಡಬಲ್ ಮಾಡುತ್ತೆ ಈ ಒಂದು ಗೊಜ್ಜು!

ಹುಳಿ, ಸಿಹಿ ಮತ್ತು ಖಾರದ ಪರ್ಫೆಕ್ಟ್ ಜುಗಲ್‌ಬಂದಿಯೇ ಈ ಅನಾನಸ್ ಗೊಜ್ಜು. ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ಈ ಗೊಜ್ಜು ಇದ್ದರೆ ಸಾಕು, ಸಿಂಪಲ್ ಊಟವೂ ಮದುವೆ ಮನೆಯ ಹಬ್ಬದ ಊಟದಂತೆ ಬದಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

ಅನಾನಸ್

ಹುಣಿಸೇಹಣ್ಣಿನ ರಸ

ಬೆಲ್ಲದ ಪುಡಿ

ಎಣ್ಣೆ

ಉಪ್ಪು

ನೀರು

ಕಡಲೆಬೇಳೆ

ಉದ್ದಿನಬೇಳೆ

ಧನಿಯಾ

ಜೀರಿಗೆ

ಬಿಳಿ ಎಳ್ಳು

ಮೆಂತ್ಯ ಕಾಳು

ಬ್ಯಾಡಗಿ ಮೆಣಸಿನಕಾಯಿ

ತೆಂಗಿನತುರಿ

ಇಂಗು

ಸಾಸಿವೆ

ಕರಿಬೇವು

 ಅರಿಶಿನ

ತಯಾರಿಸುವ ವಿಧಾನ

ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಧನಿಯಾ, ಜೀರಿಗೆ ಮತ್ತು ಮೆಂತ್ಯ ಕಾಳನ್ನು ಸಣ್ಣ ಉರಿಯಲ್ಲಿ ಕೆಂಪಾಗಾಗುವವರೆಗೆ ಹುರಿಯಿರಿ. ನಂತರ ಒಣಮೆಣಸಿನಕಾಯಿ, ಇಂಗು ಮತ್ತು ಬಿಳಿ ಎಳ್ಳು ಸೇರಿಸಿ ಎಳ್ಳು ಚಟಪಟ ಅನ್ನುವವರೆಗೆ ಹುರಿದು ಒಲೆಯಿಂದ ಇಳಿಸಿ. ಇವು ತಣ್ಣಗಾದ ಮೇಲೆ, ಹುರಿದ ಸಾಮಗ್ರಿಗಳಿಗೆ ಹಸಿ ತೆಂಗಿನತುರಿ ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಂಡು, ಅದೇ ಬಾಣಲೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಅನಾನಸ್ ತುಂಡುಗಳನ್ನು ಸೇರಿಸಿ 2-3 ನಿಮಿಷ ಚೆನ್ನಾಗಿ ಬಾಡಿಸಿ. ನಂತರ ಸ್ವಲ್ಪ ನೀರು, ಅರಿಶಿನ ಮತ್ತು ಸ್ವಲ್ಪ ಉಪ್ಪು ಹಾಕಿ ಮುಚ್ಚಳ ಮುಚ್ಚಿ ಅನಾನಸ್ ಮೃದುವಾಗುವವರೆಗೆ ಬೇಯಿಸಬೇಕು

ಅನಾನಸ್ ಬೆಂದ ನಂತರ, ಅದಕ್ಕೆ ಹುಣಿಸೇಹಣ್ಣಿನ ರಸ ಮತ್ತು ಬೆಲ್ಲದ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ. ಈಗ ರುಬ್ಬಿಟ್ಟುಕೊಂಡ ಮಸಾಲೆ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಗೊಜ್ಜಿನ ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕೈಯಾಡಿಸಿ. ಮಸಾಲೆಯ ಹಸಿ ವಾಸನೆ ಹೋಗಿ, ಗೊಜ್ಜಿನ ಮೇಲ್ಭಾಗದಲ್ಲಿ ಎಣ್ಣೆ ತೇಲುವವರೆಗೆ ಸಣ್ಣ ಉರಿಯಲ್ಲಿ 5 ರಿಂದ 7 ನಿಮಿಷ ಚೆನ್ನಾಗಿ ಕುದಿಸಿ ಒಲೆಯಿಂದ ಇಳಿಸಬೇಕು. ನಂತರ ಒಂದು ಸಣ್ಣ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಒಣಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಸಿದ್ಧಪಡಿಸಿ, ಕುದಿಸಿಟ್ಟ ಗೊಜ್ಜಿನ ಮೇಲೆ ಹಾಕಿದರೆ ಘಮಘಮಿಸುವ ಅನಾನಸ್ ಗೊಜ್ಜು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !