September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 40 | ಮೈಸೂರು ಬದನೆಕಾಯಿಯ ರುಚಿಯಾದ ಪಲ್ಯ, ಚಪಾತಿ ಜೊತೆ ಒಳ್ಳೆ ರುಚಿ

ಸಾಮಾಗ್ರಿಗಳು
ಮೈಸೂರು ಬದನೆಕಾಯಿ
ಈರುಳ್ಳಿ
ಟೊಮ್ಯಾಟೊ
ಆಲೂಗಡ್ಡೆ
ಕೊತ್ತಂಬರಿ ಸೊಪ್ಪು
ಉಪ್ಪು
ಖಾರದಪುಡಿ
ಎಣ್ಣೆ
ಸಾಂಬಾರ್‌ ಪುಡಿ
ಗರಂ ಮಸಾಲಾ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಬಾಡಿಸಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯಿಸಿ
ಆನಂತರ ಬದನೆಕಾಯಿ ಹಾಕಬೇಕು. ಇದನ್ನು ಕೂಡ ಬಾಡಿಸಿ, ಜೊತೆಗೆ ಆಲೂಗಡ್ಡೆ ಹಾಕಿ
ಇದೆಲ್ಲವೂ ಮುಕ್ಕಾಲು ಬೆಂದ ನಂತರ ಖಾರದಪುಡಿ, ಉಪ್ಪು, ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಕಿ
ಆನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ
ಗ್ರೇವಿ ಬೇಕೆಂದರೆ ಇದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ

Must Read