ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಇವರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ತೆರಳಲಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.
ದೆಹಲಿಗೆ ತೆರಳುವ ಮುನ್ನ ಕರ್ನಾಟಕ ಭವನದಲ್ಲಿ ವಕೀಲರನ್ನು ಭೇಟಿ ಮಾಡಲಿದ್ದಾರೆ. ತದನಂತರ ಸಿಎಂ ಸರ್ವ ಪಕ್ಷ ಸಂಸದರ ಸಭೆಯನ್ನು ಅಟೆಂಡ್ ಮಾಡಲಿದ್ದಾರೆ. ಕೇಂದ್ರದಲ್ಲಿ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಸಂಪುಟ ವಿಸ್ತರಣೆ ಹಿನ್ನೆಲೆ ಸಿಎಂಗೂ ಮೊದಲೇ ದೆಹಲಿಗೆ ಶಾಸಕರ ದಂಡು ಆಗಮಿಸಿದೆ. ಅಶೋಕ್ ಪಟ್ಟಣ, ಬಸನಗೌಡ ದದ್ದಲ್, ಬಸನಗೌಡ ಬಾದರ್ಲಿ, ಪುಟ್ಟರಂಗ ಶೆಟ್ಟಿ, ವಸಂತ್ ಕುಮಾರ್, ಪಿ.ಎಂ ನರೇಂದ್ರ ಸ್ವಾಮಿ, ಸುಧಾಮ್ ದಾಸ್ ಮತ್ತು ಹಂಪನಗೌಡ ಬಾದರ್ಲಿ ದೆಹಲಿಗೆ ಆಗಮಿಸಿದ್ದಾರೆ.



