July 27, 2026
Monday, July 27, 2026
spot_img

CINE | ‘ಧೂಮ್ 4’ ಮಾಡ್ತಿಲ್ವಾ ರಣಬೀರ್? ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) 2026ರ ಅದ್ಧೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಅವರೊಂದಿಗೆ ಭಾಗವಹಿಸಿ, ಚಿತ್ರದ ಪ್ರಚಾರ ನಡೆಸಿ ಅಭಿಮಾನಿಗಳನ್ನು ರಂಜಿಸಿದರು.

‘ಧೂಮ್ 4’ ವದಂತಿಗೆ ಪೂರ್ಣವಿರಾಮ

ಕಾರ್ಯಕ್ರಮದಲ್ಲಿ ‘ಧೂಮ್ 4’ ಚಿತ್ರದ ವದಂತಿಗಳ ಕುರಿತು ಮಾತನಾಡಿದ ರಣಬೀರ್, “ನಾನು ಪ್ರಸ್ತುತ ಈ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಸದ್ಯಕ್ಕೆ ನನ್ನ ಸಂಪೂರ್ಣ ಗಮನ ‘ರಾಮಾಯಣ’ ಹಾಗೂ 2027ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರಗಳ ಮೇಲಿದೆ” ಎಂದು ತಿಳಿಸಿ ಗಾಸಿಪ್‌ಗಳಿಗೆ ಮುಕ್ತಾಯ ಹಾಡಿದರು.

‘ಅನಿಮಲ್ ಪಾರ್ಕ್’ ಸೀಕ್ವೆಲ್ ಬಗ್ಗೆ ಸಸ್ಪೆನ್ಸ್

ತಮ್ಮ ಮುಂಬರುವ ಚಿತ್ರಗಳ ಕುರಿತು ಮುಕ್ತವಾಗಿ ಚರ್ಚಿಸಿದ ನಟ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬ್ಲಾಕ್ಬಸ್ಟರ್ ‘ಅನಿಮಲ್’ ಚಿತ್ರದ ಸೀಕ್ವೆಲ್ ‘ಅನಿಮಲ್ ಪಾರ್ಕ್’ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ. ಇದು ಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹಾಗೂ ಅಚ್ಚರಿಯನ್ನು ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !