ಹೊಸದಿಗಂತ ವರದಿ ಹಾವೇರಿ :
ಪತ್ನಿಯ ಸಾವಿನ ವಿಷಯ ತಿಳಿದು ಗಂಡನೂ ಮನೋ ವೇದನೆ ತಾಳದೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ನಡೆದಿದೆ.
ಶಾಂತಮ್ಮ ಮತ್ತು ಜುಂಜಪ್ಪ 45 ವರ್ಷಗಳಿಂದ ಅನ್ಯೋನ್ಯವಾಗಿ ಬದುಕಿದ್ದ ದಂಪತಿ. ಭಾನುವಾರ ರಾತ್ರಿ 12 ಗಂಟೆಗೆ ಪತ್ನಿ ಶಾಂತಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೇ ದುಖಃದಲ್ಲಿದ್ದ ಗಂಡ ಜುಂಜಪ್ಪ ಕೂಡ ಇಡೀ ರಾತ್ರಿ ಕಣ್ಣೀರಿಟ್ಟದ್ದರು.
ಸೋಮವಾರ ಬೆಳಗ್ಗೆ 8:30 ಕ್ಕೆ ಪತಿ ಜುಂಜಪ್ಪ ಬಾರ್ಕಿ (70) ಸಹ ಸಾವನ್ನಪ್ಪಿದ್ದಾರೆ. 45 ವರ್ಷಗಳಿಂದ ಪತ್ನಿ ಜೊತೆ ಅನ್ಯೂನ್ಯವಾಗಿದ್ದರು. ಪತ್ನಿಯ ಅಗಲಿಕೆಯ ನೋವನ್ನು ತಾಳಲಾರದೇ ನೋವಿನಿಂದ ಜೀವ ತೊರೆದಿದ್ದಾರೆ. ಮದುವೆಯ ಸಂದರ್ಭದಲ್ಲಿ ಜೀವನವಿಡೀ ನಿನ್ನೊಂದಿಗೆ ಪ್ರೀತಿಯಿಂದ ಕಳೆಯುತ್ತೀನಿ ಎಂದು ಹೇಳುವ ಮಾತನ್ನು ಅಕ್ಷರಶಃ ಜೀವಿಸಿದ್ದಾರೆ. ಇದೀಗ ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದ್ದು, ಗ್ರಾಮದ ಜನರು ಸಾವಿನಲ್ಲೂ ಒಂದಾದ ಜೋಡಿಗಳನ್ನು ಕಂಡು ಭಾವುಕರಾಗಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಹೊದಾಣಿಕೆ ಕೊರತೆಯಿಂದ ಕುಟುಂಬ ವ್ಯವಸ್ಥೆಯ ಬಗ್ಗೆ ಗೊಂದಲದ ದಿನಗಳಲ್ಲಿ ಈ ಜೋಡಿಯ ಪ್ರೀತಿ ನೋಡಿ ಜನ ಮೌನವಾಗಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



