July 28, 2026
Tuesday, July 28, 2026
spot_img

ಕ್ಯಾಬ್‌ಗಾಗಿ ಕಾಯ್ತಿದ್ದ ಮಹಿಳೆಗೆ ʼನಿನ್ನ ರೇಟ್‌ ಎಷ್ಟು?ʼ ಎಂದು ಕೇಳಿದ ಕಾಮುಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳವಾಗಿದೆ. ರಾಮಮೂರ್ತಿ ನಗರದಲ್ಲಿ ರಸ್ತೆ ಬದಿ ನಿಂತು ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ನಿನ್ನ ರೇಟ್‌ ಎಷ್ಟು ಎಂದು ಕೇಳಿ ಕಿರುಕುಳ ನೀಡಿದ್ದಾನೆ.

ವಿಜಯ್‌ ರಾಘವ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎನ್‌ಆರ್‌ಐ ಲೇಔಟ್‌ನ ನಿವಾಸಿಯಾಗಿರುವ ಈತ ಹಣ್ಣಿನ ವ್ಯಾಪಾರಿ ಎಂದು ತಿಳಿದುಬಂದಿದೆ.

ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ (Cab) ಕಾಯುತ್ತಿದ್ದ ಯುವತಿಯೊಬ್ಬಳಿಗೆ ʻನಿನ್ ರೇಟ್ ಎಷ್ಟು?ʼ ಅಂತ ಕಿರುಕುಳ ನೀಡಿದ ಶೋಚನೀಯ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಸ್ಕೂಟರ್‌ನಲ್ಲಿ ಬಂದ ವಿಜಯ್‌ ರಾಘವ್‌ ಯುವತಿಯನ್ನ ಕಂಡ ತಕ್ಷಣ ಅಸಭ್ಯವಾಗಿ ಮಾತನಾಡಿಸಿ, ಲೈಂಗಿಕವಾಗಿ ನಿಂದಿಸುತ್ತಾ ರೇಟ್ ಎಷ್ಟು? ಎಂದು ಕೇಳಿ ಕಿರುಕುಳ ನೀಡಿದ್ದ. ತಕ್ಷಣವೇ ಯುವತಿ ಮೊಬೈಲ್‌ ತೆಗೆದು ವಿಡಿಯೋ ಮಾಡಿಕೊಂಡಿದ್ದಳು. ಯುವತಿ ಫೋನ್‌ ತೆಗೆದ ಕೂಡಲೇ ವಿಜಯ್‌ ಸ್ಥಳದಿಂದ ಪರಾರಿಯಾಗಿದ್ದ.

ಬಳಿಕ, ಯುವತಿ ಆ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ನಗರದಲ್ಲಿ ಒಂಟಿಯಾಗಿ ನಿಲ್ಲಲು ಭಯವಾಗುವ ಪರಿಸ್ಥಿತಿ ಬಂದಿದೆಯೇ ಎಂದು ಕಳವಳ ವ್ಯಕ್ತಪಡಿಸಿದ್ದರು. ವೀಡಿಯೋ ಸಮೇತ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ, ಆರೋಪಿಯ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಂತೆಯೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !