October 8, 2026
Thursday, October 8, 2026
spot_img

CINE | ‘ಕಹಾನಿ 3’ನಲ್ಲಿ ದೊಡ್ಡ ಟ್ವಿಸ್ಟ್: ವಿದ್ಯಾ ಬಾಲನ್ ಔಟ್‌, ಯಾಮಿ ಇನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಯಶಸ್ವಿ ಮಹಿಳಾ ಪ್ರಧಾನ ಸಸ್ಪೆನ್ಸ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ಕಹಾನಿ’ ಮತ್ತೆ ಸುದ್ದಿಯಲ್ಲಿದೆ. ಹಲವು ವರ್ಷಗಳ ಬಳಿಕ ಮೂರನೇ ಭಾಗಕ್ಕೆ ಚಿತ್ರತಂಡ ಸಿದ್ಧತೆ ಆರಂಭಿಸಿದ್ದು, ಈ ಬಾರಿ ನಾಯಕಿ ಪಾತ್ರದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಹಿಂದಿನ ಎರಡು ಭಾಗಗಳಲ್ಲಿ ಮಿಂಚಿದ್ದ ವಿದ್ಯಾ ಬಾಲನ್ ಅವರ ಬದಲಿಗೆ ಯಾಮಿ ಗೌತಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಾಮಿ ಗೌತಮ್‌ಗೆ ಸಿಕ್ಕ ಹೊಸ ಅವಕಾಶ

ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಯಾಮಿ ಗೌತಮ್, ಇದೀಗ ‘ಕಹಾನಿ 3’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಸಿನಿಮಾ ಯುವ ತಾಯಿಯ ಜೀವನದ ಸುತ್ತ ಸಾಗುವ ಕಥಾಹಂದರ ಹೊಂದಿರುವುದರಿಂದ, ಪಾತ್ರಕ್ಕೆ ಯಾಮಿ ಸೂಕ್ತ ಎನ್ನುವ ನಿರ್ಧಾರವನ್ನು ಚಿತ್ರತಂಡ ತೆಗೆದುಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ:

ಸುಜೋಯ್ ಘೋಷ್ ನಿರ್ದೇಶನ ಮುಂದುವರಿಕೆ

ಹಿಂದಿನ ಎರಡು ಭಾಗಗಳನ್ನು ನಿರ್ದೇಶಿಸಿದ್ದ ಸುಜೋಯ್ ಘೋಷ್ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಕಥೆ ಸಂಪೂರ್ಣ ಹೊಸದಾಗಿದ್ದರೂ, ‘ಕಹಾನಿ’ ಸರಣಿಯ ಸಸ್ಪೆನ್ಸ್ ಹಾಗೂ ಭಾವನಾತ್ಮಕ ಅಂಶಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರೀ-ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ

ಸದ್ಯ ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಯಾಮಿ ಗೌತಮ್ ಅಭಿನಯಿಸುವ ಪಾತ್ರವು ಬಲಿಷ್ಠ ವ್ಯಕ್ತಿತ್ವ ಹೊಂದಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂಬ ಮಾಹಿತಿ ಚಿತ್ರತಂಡದಿಂದ ಲಭ್ಯವಾಗಿದೆ.

Must Read