July 28, 2026
Tuesday, July 28, 2026
spot_img

ಎ.ಆರ್.ರೆಹಮಾನ್-ಹ್ಯಾನ್ಸ್ ಜಿಮ್ಮರ್ ಮ್ಯೂಸಿಕ್ ಮ್ಯಾಜಿಕ್: ದಾಖಲೆ ಬೆಲೆಗೆ ‘ರಾಮಾಯಣ’ ಸಂಗೀತ ಹಕ್ಕು ಮಾರಾಟ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣ್‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ನಟಿಸುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕರಣ್ ಜೋಹರ್ ಒಳಗೊಂಡ ತಂಡ ಈ ಸಿನಿಮಾದ ಭಾರತೀಯ ವಿತರಣಾ ಹಕ್ಕುಗಳನ್ನು ಸುಮಾರು 250 ಕೋಟಿ ರೂಪಾಯಿಗೆ ಪಡೆದುಕೊಂಡಿತ್ತು.

ಆಸ್ಕರ್ ವಿಜೇತರ ಅಬ್ಬರ, ಆಡಿಯೋ ಹಕ್ಕುಗಳಿಗೆ ಭಾರಿ ಪೈಪೋಟಿ

ಈ ಬೃಹತ್ ಚಿತ್ರಕ್ಕೆ ವಿಶ್ವದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ದಿಗ್ಗಜ ಹ್ಯಾನ್ಸ್ ಜಿಮ್ಮರ್ ಒಂದಾಗಿ ಸ್ವರಸಂಯೋಜನೆ ಮಾಡುತ್ತಿದ್ದಾರೆ. ಈ ಅದ್ಭುತ ಕಾಂಬಿನೇಷನ್ ಕಾರಣದಿಂದಾಗಿ, ಸಿನಿಮಾದ ಸಂಗೀತ ಹಕ್ಕುಗಳನ್ನು ಬರೋಬ್ಬರಿ 100 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.

ಗ್ಲೋಬಲ್ ಮಟ್ಟದಲ್ಲಿ ಕ್ರೇಜ್

ದೇಶದ ಪ್ರಮುಖ ಮ್ಯೂಸಿಕ್ ಲೇಬಲ್‌ಗಳು ಈ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಲು ಸಾಲಾಗಿ ನಿಂತಿವೆ. ಭಾರತ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಈ ಚಿತ್ರಕ್ಕೆ ಅಪಾರ ಬೇಡಿಕೆ ಇರುವುದರಿಂದ, ಮ್ಯೂಸಿಕ್ ರೈಟ್ಸ್ ವ್ಯಾಪಾರದಲ್ಲಿ ಹೊಸ ದಾಖಲೆ ಬರೆಯುವುದು ಖಚಿತ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !