ದುಬಾರಿ ಬೆಲೆಯ ಕೇಸರಿಯನ್ನು ಖರೀದಿಸುವಾಗ ನಕಲಿ ಸರಕುಗಳ ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ನಿಮ್ಮ ಬಳಿ ಇರುವ ಕೇಸರಿ ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ನೀರಿನ ಪರೀಕ್ಷೆ:
ಸ್ವಲ್ಪ ಉಗುರುಬೆಚ್ಚಗಿನ ನೀರಿಗೆ ಕೆಲವು ಕೇಸರಿ ಎಳೆಗಳನ್ನು ಹಾಕಿ. ಅಸಲಿ ಕೇಸರಿಯು ನಿಧಾನವಾಗಿ ತಿಳಿ ಹಳದಿ ಬಣ್ಣವನ್ನು ಬಿಡುಗಡೆ ಮಾಡುತ್ತದೆ. ಒಂದು ವೇಳೆ ನೀರು ತಕ್ಷಣವೇ ಗಢವಾದ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದರೆ, ಅದು ಖಂಡಿತವಾಗಿಯೂ ನಕಲಿ.
ವಾಸನೆ ಮತ್ತು ರುಚಿ:
ಅಸಲಿ ಕೇಸರಿಯು ಮಧುರವಾದ ಮತ್ತು ಗಾಢವಾದ ಸುವಾಸನೆ ಹೊಂದಿರುತ್ತದೆ. ಆದರೆ ಅದರ ರುಚಿ ಕೊಂಚ ಕಹಿಯಾಗಿರುತ್ತದೆ. ಸಿಹಿಯಾದ ರುಚಿ ನೀಡಿದರೆ ಅದಕ್ಕೆ ಸಕ್ಕರೆ ಪಾಕ ಅಥವಾ ರಾಸಾಯನಿಕ ಬೆರೆಸಲಾಗಿದೆ ಎಂದರ್ಥ.
ಬೆರಳಿನಿಂದ ಉಜ್ಜುವ ಪರೀಕ್ಷೆ:
ನೀರಿನಲ್ಲಿ ನೆನೆಸಿದ ಕೇಸರಿ ಎಳೆಯನ್ನು ಬೆರಳುಗಳ ನಡುವೆ ಇಟ್ಟು ಉಜ್ಜಿದಾಗ, ಅಸಲಿ ಎಳೆಗಳು ತಕ್ಷಣವೇ ತುಂಡಾಗುವುದಿಲ್ಲ ಮತ್ತು ಬೆರಳಿಗೆ ಹಳದಿ ಬಣ್ಣ ನೀಡುತ್ತವೆ. ನಕಲಿ ಕೇಸರಿ ಎಳೆಗಳು ಸುಲಭವಾಗಿ ಪುಡಿಯಾಗುತ್ತವೆ.
ಅಡುಗೆ ಸೋಡಾ ಪರೀಕ್ಷೆ:
ನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತು ಕೇಸರಿ ಸೇರಿಸಿ ಕಲಕಿ. ನೀರು ಹಳದಿ ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ಕೇಸರಿ. ಒಂದು ವೇಳೆ ಕೆಂಪು ಬಣ್ಣಕ್ಕೆ ತಿರುಗಿದರೆ ಅದು ಕೃತಕ ಬಣ್ಣದ ನಕಲಿ ಉತ್ಪನ್ನ.
ಖರೀದಿಸುವಾಗ ಜಿಐ ಟ್ಯಾಗ್ (GI Tag) ಹೊಂದಿರುವ ಕುಂಕುಮಪುಷ್ಪ ಆಯ್ಕೆ ಮಾಡುವುದು ಹೆಚ್ಚು ಸುರಕ್ಷಿತ.



