July 29, 2026
Wednesday, July 29, 2026
spot_img

ಮರಣ ಮೃದಂಗ ಬಾರಿಸುತ್ತಿದೆ ಕಪ್ಪು ಸಮುದ್ರ: ಹಡಗಿನಲ್ಲೇ ಉಸಿರು ಬಿಗಿಹಿಡಿದು ಕುಳಿತ 13 ಭಾರತೀಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಮತ್ತು ಉಕ್ರೇನ್ ನಡುವಿನ ರಕ್ತಸಿಕ್ರ ಸಂಘರ್ಷ ಮುಂದುವರಿದಿದ್ದು, ಕಪ್ಪು ಸಮುದ್ರದ ಚೋರ್ನೊಮೊರ್ಸ್ಕ್ ಬಂದರಿನ ಬಳಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಈ ಬಂದರಿನಲ್ಲಿ ನಿಂತಿರುವ ಹಡಗಿನಲ್ಲಿ ಸುಮಾರು 13 ಭಾರತೀಯ ನಾವಿಕರು ಸಿಲುಕಿಕೊಂಡಿದ್ದು, ಅವರ ಜೀವಕ್ಕೆ ತೀವ್ರ ಅಪಾಯ ಎದುರಾಗಿದೆ.

ಸತತ ಡ್ರೋನ್, ಕ್ಷಿಪಣಿ ದಾಳಿ: FSUI ಎಚ್ಚರಿಕೆ

ಹಡಗಿನ ತೀರಾ ಸಮೀಪದಲ್ಲೇ ಸತತವಾಗಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಯಾವುದೇ ಕ್ಷಣದಲ್ಲಿ ಹಡಗಿನ ಮೇಲೆ ನೇರ ದಾಳಿ ಸಂಭವಿಸುವ ಭೀತಿ ವ್ಯಕ್ತವಾಗಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಭಾರತೀಯ ನಾವಿಕರ ಒಕ್ಕೂಟ (FSUI), ನಾವಿಕರನ್ನು ತಕ್ಷಣವೇ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಮತ್ತು ಹಡಗು ಮಾಲೀಕ ಸಂಸ್ಥೆಗೆ ಮನವಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಆತಂಕಕಾರಿ ವಿಡಿಯೋ

ದಾಳಿಯ ಭೀಕರತೆಯನ್ನು ಬಿಂಬಿಸುವ ವಿಡಿಯೋವೊಂದನ್ನು FSUI ‘X’ ಖಾತೆಯಲ್ಲಿ ಹಂಚಿಕೊಂಡಿದೆ. ಹಡಗಿನ ಸುತ್ತಲೂ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿದ್ದು, ನಾವಿಕರು ಪ್ರತಿ ಕ್ಷಣವನ್ನೂ ಭಯದಲ್ಲೇ ಕಳೆಯುತ್ತಿದ್ದಾರೆ.

ಕೇಂದ್ರ ಸರ್ಕಾರದ ಸ್ಪಂದನೆಗೆ ಕಾಯುತ್ತಿರುವ ಕುಟುಂಬಸ್ಥರು

ಇಷ್ಟೆಲ್ಲಾ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದ್ದರೂ, ವಿದೇಶಾಂಗ ಸಚಿವಾಲಯ ಅಥವಾ ಸಂಬಂಧಪಟ್ಟ ಹಡಗು ಕಂಪನಿಯಿಂದ ಇದುವರೆಗೆ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಸಿಲುಕಿರುವ ನಾವಿಕರನ್ನು ತಕ್ಷಣವೇ ರಕ್ಷಿಸಬೇಕೆಂದು ಅವರ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !