September 14, 2026
Monday, September 14, 2026
spot_img

ಥೈರಾಯ್ಡ್‌ ಇರುವವರಿಗೆ ಕೊತ್ತಂಬರಿ ಬೀಜ ರಾಮಬಾಣ, ನಿತ್ಯವೂ ಇದನ್ನು ಸೇವಿಸಿದ್ರೆ ಏನಿದೆ ಲಾಭ?

ಕೊತ್ತಂಬರಿ ಬೀಜ ಕೇವಲ ಸಂಬಾರಿಗೆ ಮಾತ್ರವಲ್ಲ, ಇದರ ನೀರನ್ನು ಬಳಸುವ ಮೂಲಕ ಹತ್ತಾರು ಲಾಭಗಳನ್ನು ಪಡೆಯಬಹುದು. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಹೊಟ್ಟೆಯ ಗ್ಯಾಸ್, ಎದೆಯುರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಥೈರಾಯ್ಡ್‌ ಇರುವವರಿಗೆ ಇದು ಬೆಸ್ಟ್‌. ಕೊತ್ತಂಬರಿ ಬೀಜದ ನೀರನ್ನು ಸೇವಿಸುವುದರಿಂದ ಏನು ಲಾಭ?

ರಾತ್ರಿಯಿಡೀ ನೀರಿನಲ್ಲಿ ಕೊತ್ತಂಬರಿ ಬೀಜವನ್ನು ನೆನೆಸಿ ಇಡಿ. ಆನಂತರ ಅದನ್ನು ಕುದಿಸಿ ಸೇವನೆ ಮಾಡಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.

ಕೊತ್ತಂಬರಿ ಬೀಜದಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಗ್ಲೂಕೋಸ್ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಬಹುದು‌. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹಾರ್ಮೋನುಗಳ ಸಮತೋಲನ ಹಾಗೂ ಸಕ್ಕರೆ ಮಟ್ಟವನ್ನು ತಗ್ಗಿಸಬಹುದು.

ಕೊತ್ತಂಬರಿ ನೀರು ಇದು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯಕ ವಾಗುತ್ತದೆ. ನಿಮ್ಮ ದೇಹವು ಹೆಚ್ಚು ಹೀಟ್ ಆಗಿದ್ದು ಉರಿಯೂತ ಲಕ್ಷಣಗಳನ್ನು ಹೊಂದಿದ್ದರೆ ಕೊತ್ತಂಬರಿ ನೀರಿನ ಸೇವನೆ ಮಾಡಬಹುದು.

ಥೈರಾಯ್ಡ್‌ ಇರುವವರು ಡಯಟ್‌ನಲ್ಲಿ ಈ ಡ್ರಿಂಕ್‌ನ್ನು ಸೇರಿಸಬೇಕು. ಇದು ಹಾರ್ಮೋನ್‌ಗಳನ್ನು ಸರಿಯಾದ ಜಾಗದಲ್ಲಿ ಇಡಲು ಸಹಾಯ ಮಾಡುತ್ತದೆ.

ತೂಕ ಇಳಿಕೆ ಮಾಡಬೇಕೆಂದು ಇದ್ದವರು ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಮಾಡಬಹುದು.ಬೆಳಿಗ್ಗಿನ ಸೇವನೆಯು ಕೊಬ್ಬನ್ನು ಕಡಿಮೆ ಮಾಡಲು ಹಾಗೂ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ,ಹಾಗೂ ಅತಿಯಾಗಿ ತಿನ್ನುವುದನ್ನು ಸಹ ತಡೆಯುತ್ತದೆ.

ಕೊತ್ತಂಬರಿ ನೀರು ಕುಡಿಯುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆ ಯನ್ನು ಅಭಿವೃದ್ಧಿ ಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಆರೋಗ್ಯವನ್ನು ಸುಧಾರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !