September 23, 2026
Wednesday, September 23, 2026
spot_img

ವರ್ತೂರು ಗ್ರೌಂಡ್‌ನಲ್ಲಿ ಮನುಷ್ಯನ ರುಂಡ ಪತ್ತೆ! ಇದು ಕೊಲೆಯಾ ಅಥವಾ ಸೂಸೈಡ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆಯಾಗಿದೆ.

ರುಂಡ ಪತ್ತೆಯಾದ ಸ್ಥಳದ ಪಕ್ಕದಲ್ಲಿ ರೈಲ್ವೇ ಹಳಿಯಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ರುಂಡವನ್ನು ನಾಯಿ ಎಳೆತಂದು ಹಾಕಿರಬಹುದು ಅಥವಾ ಕೊಲೆ ಮಾಡಿರಬಹುದು ಎನ್ನಲಾಗಿದೆ.

ರುಂಡ ಪತ್ತೆಯಾದ ವ್ಯಕ್ತಿ ಯಾರು ಎಂಬ ಗುರುತು ಪತ್ತೆಯಾಗಿಲ್ಲ. ಅಲ್ಲದೇ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆಯೂ ಸರಿಯಾಗಿ ತಿಳಿದು ಬಂದಿಲ್ಲ.

ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !