July 29, 2026
Wednesday, July 29, 2026
spot_img

ಪಿಎಂ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: 400ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಐಡಿಗಳಿಗೆ ನೋಟಿಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಹಾಗೂ ‘ಸಂಸದ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಹರಿದಾಡುತ್ತಿದ್ದ ನಿಂದನೀಯ ಮತ್ತು ಆಕ್ಷೇಪಾರ್ಹ ಪೋಸ್ಟ್‌ಗಳ ವಿರುದ್ಧ ದೆಹಲಿ ಪೊಲೀಸರು ಸಮರ ಸಾರಿದ್ದಾರೆ. ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂತಹ ವಿಷಯಗಳನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ ಸೇರಿದಂತೆ ಹಲವು ಪ್ರಮುಖ ಸುದ್ದಿ ಪೋರ್ಟಲ್‌ಗಳಿಗೆ ಸೈಬರ್ ಕ್ರೈಮ್ ವಿಭಾಗವು ನೋಟಿಸ್ ಜಾರಿ ಮಾಡಿದೆ.

ಅಸಭ್ಯ ಪೋಸ್ಟ್ ಹಾಗೂ ವೀಡಿಯೊ ತಕ್ಷಣ ಡಿಲೀಟ್ ಮಾಡಲು ಆದೇಶ

ಜುಲೈ 20 ರ ಪ್ರತಿಭಟನೆ ವೇಳೆ ಪ್ರಧಾನಿಯವರ ಕುರಿತು ಹರಿಬಿಡಲಾದ ಅಸಭ್ಯ ಕಾಮೆಂಟ್‌ಗಳು ಮತ್ತು ಆಕ್ಷೇಪಾರ್ಹ ವೀಡಿಯೊಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ಸಾಮಾಜಿಕ ಮಾಧ್ಯಮ ಕಾವಲು ಪಡೆ ಡಿಜಿಟಲ್ ವೇದಿಕೆಗಳನ್ನು ನಿರಂತರವಾಗಿ ಸ್ಕ್ಯಾನ್ ಮಾಡುತ್ತಿದ್ದು, ಕಾನೂನು ಉಲ್ಲಂಘಿಸುವ ಪೋಸ್ಟ್‌ಗಳನ್ನು ತಕ್ಷಣ ಗುರುತಿಸುತ್ತಿದೆ.

ಪಾಕ್ ಲಿಂಕ್ ಮತ್ತು ಡೀಪ್‌ಫೇಕ್ ಖಾತೆಗಳ ಪತ್ತೆ

ಚಳವಳಿಯ ಮರೆಯಲ್ಲಿ ಸುಳ್ಳು ಮಾಹಿತಿ, ವದಂತಿ ಹಾಗೂ ಡೀಪ್‌ಫೇಕ್ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದ 400ಕ್ಕೂ ಹೆಚ್ಚು ‘ಎಕ್ಸ್’ ಖಾತೆಗಳನ್ನು ಪತ್ತೆಹಚ್ಚಲಾಗಿದೆ. ಇವುಗಳಲ್ಲಿ ಕೆಲವು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿವೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಕಾಯ್ದೆ ಹಾಗೂ ಬಿಎನ್‌ಎಸ್ ನಿಬಂಧನೆಗಳಡಿ ದೆಹಲಿ ಸೈಬರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಶಾಂತಿ ಭಂಗ ತರುವವರ ವಿರುದ್ಧ ಶೂನ್ಯ ಸಹಿಷ್ಣುತೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !