July 30, 2026
Thursday, July 30, 2026
spot_img

ಹಾಕಿ ಕಿಟ್‌ನಲ್ಲಿ ಬಿಳಿ-ಕೇಸರಿ ಧಮಾಕಾ: ಪರಂಪರೆ ಮರೆತಿತೇ ಹಾಕಿ ಇಂಡಿಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಆಗಸ್ಟ್ 14 ರಿಂದ 30 ರವರೆಗೆ ನಡೆಯಲಿರುವ ಪುರುಷರ ಹಾಗೂ ಆಗಸ್ಟ್ 15 ರಿಂದ 30 ರವರೆಗಿನ ಮಹಿಳಾ ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ ಹೊಸ ಕಿಟ್ ಅನಾವರಣಗೊಳಿಸಿದೆ. ಈ ಬಾರಿ ದಶಕಗಳ ಸಾಂಪ್ರದಾಯಿಕ ನೀಲಿ ಬಣ್ಣದ ಬದಲಾಗಿ, ಪ್ರಮುಖವಾಗಿ ಕೇಸರಿ ಹಾಗೂ ಪರ್ಯಾಯವಾಗಿ ಬಿಳಿ ಬಣ್ಣದ ಜೆರ್ಸಿಯನ್ನು ಪರಿಚಯಿಸಲಾಗಿದೆ.

ಮಾಜಿ ನಾಯಕನ ಖಡಕ್ ರಿಯಾಕ್ಷನ್

ತಂಡದ ಈ ದಿಢೀರ್ ನಿರ್ಧಾರಕ್ಕೆ ಮಾಜಿ ನಾಯಕ ವೀರೇನ್ ರಸ್ಕಿನ್ಹಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ಬರೆದುಕೊಂಡಿರುವ ಅವರು, “ಹಾಕಿ ಇಂಡಿಯಾ ಕ್ರೀಡೆಯ ಬೆಳವಣಿಗೆಗೆ ಶ್ರಮಿಸಿದೆ ನಿಜ, ಆದರೆ ಬಣ್ಣ ಬದಲಿಸಿರುವುದು ನಿರಾಸೆ ಮೂಡಿಸಿದೆ. ಭಾರತೀಯ ಹಾಕಿಯ ಗುರುತು ಮತ್ತು ಪರಂಪರೆ ಯಾವಾಗಲೂ ‘ನೀಲಿ’ ಬಣ್ಣದಲ್ಲೇ ಇದೆ. ಅಭಿಮಾನಿಗಳು ನಮ್ಮನ್ನು ಅದೇ ಬಣ್ಣದಲ್ಲಿ ನೋಡಲು ಬಯಸುತ್ತಾರೆ. ಇದ್ದಕ್ಕಿದ್ದಂತೆ ಕೇಸರಿಗೆ ಬದಲಾಗಲು ಕಾರಣವೇನು?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಪ್ರಸ್ತುತ ಈ ಹೊಸ ಜೆರ್ಸಿ ಕ್ರೀಡಾಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !