July 30, 2026
Thursday, July 30, 2026
spot_img

Unhealthy | ಫ್ಲಾಸ್ಕ್‌ನಲ್ಲಿಟ್ಟ ಟೀ-ಕಾಫಿ ಕುಡಿದರೆ ಗ್ಯಾಸ್ಟ್ರಿಕ್ ಆಗುತ್ತಾ? ಇಲ್ಲಿದೆ ಅಸಲಿ ಸತ್ಯ

ಇಂದಿನ ಧಾವಂತದ ಜೀವನದಲ್ಲಿ ಸಮಯ ಉಳಿಸಲು ಅಥವಾ ಪ್ರಯಾಣದ ಸಮಯದಲ್ಲಿ ಬಿಸಿಬಿಸಿಯಾದ ಪಾನೀಯ ಸಿಗಲಿ ಎಂಬ ಕಾರಣಕ್ಕೆ ಹೆಚ್ಚಿನವರು ಫ್ಲಾಸ್ಕ್ಬ ಳಸುತ್ತಾರೆ. ಬೆಳಗ್ಗೆಯೇ ಟೀ ಅಥವಾ ಕಾಫಿ ಮಾಡಿ ಫ್ಲಾಸ್ಕ್‌ನಲ್ಲಿ ತುಂಬಿಸಿಟ್ಟು, ದಿನವಿಡೀ ಅದನ್ನೇ ಕುಡಿಯುವ ಅಭ್ಯಾಸ ಅನೇಕರಿಗಿದೆ. ಆದರೆ, ಈ ರೀತಿ ದೀರ್ಘಕಾಲ ಫ್ಲಾಸ್ಕ್‌ನಲ್ಲಿ ಇಟ್ಟ ಟೀ-ಕಾಫಿ ಕುಡಿಯುವುದು ನಮ್ಮ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುವುದು ನಿಮಗೆ ಗೊತ್ತೇ?

ಪೌಷ್ಟಿಕಾಂಶಗಳ ನಾಶ

ಟೀ ಮತ್ತು ಕಾಫಿಯಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಆದರೆ, ಇವುಗಳನ್ನು ಮಾಡಿ ದೀರ್ಘಕಾಲದವರೆಗೆ ಫ್ಲಾಸ್ಕ್‌ನಲ್ಲಿ ಇಟ್ಟಾಗ, ತಾಪಮಾನದ ಏರುಪೇರಿನಿಂದಾಗಿ ಅವುಗಳ ಆಕ್ಸಿಡೀಕರಣ ಪ್ರಕ್ರಿಯೆ ಆರಂಭವಾಗುತ್ತದೆ. ಇದರಿಂದ ಟೀ-ಕಾಫಿಯ ನೈಜ ರುಚಿ ಮತ್ತು ಸುವಾಸನೆ ಕಳೆದುಹೋಗುವುದಲ್ಲದೆ, ಅದರಲ್ಲಿರುವ ಒಳ್ಳೆಯ ಪೋಷಕಾಂಶಗಳೂ ನಾಶವಾಗುತ್ತವೆ.

ಬ್ಯಾಕ್ಟೀರಿಯಾಗಳ ಬೆಳವಣಿಗೆಯ ಆತಂಕ

ಸಾಮಾನ್ಯವಾಗಿ ನಾವು ಟೀ ಅಥವಾ ಕಾಫಿಗೆ ಹಾಲು ಮತ್ತು ಸಕ್ಕರೆಯನ್ನು ಬಳಸುತ್ತೇವೆ. ಹಾಲಿನ ಉತ್ಪನ್ನಗಳನ್ನು ದೀರ್ಘಕಾಲದವರೆಗೆ ಬಿಸಿ ವಾತಾವರಣದಲ್ಲಿ ಇಟ್ಟಾಗ ಅದರಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ವೃದ್ಧಿಯಾಗಲು ಪ್ರಾರಂಭಿಸುತ್ತವೆ. ನಾವು ಫ್ಲಾಸ್ಕ್ ಅನ್ನು ಸರಿಯಾಗಿ ತೊಳೆಯದಿದ್ದರೆ ಅಥವಾ ಅದರ ಮುಚ್ಚಳದ ರಬ್ಬರ್ ಗ್ಯಾಸ್ಕೆಟ್‌ನಲ್ಲಿ ಕೊಳೆ ಉಳಿದಿದ್ದರೆ, ಈ ಬ್ಯಾಕ್ಟೀರಿಯಾಗಳು ಹೊಟ್ಟೆಯ ಸೋಂಕು, ವಾಂತಿ ಅಥವಾ ಅತಿಸಾರಕ್ಕೆ ಕಾರಣವಾಗಬಹುದು.

ಆಸಿಡಿಟಿ ಮತ್ತು ಜೀರ್ಣಕ್ರಿಯೆಯ ಸಮಸ್ಯೆ

ದೀರ್ಘಕಾಲ ಪ್ಲಾಸ್ಕ್‌ನಲ್ಲಿಟ್ಟ ಟೀ-ಕಾಫಿ ಹೆಚ್ಚು ಕಹಿಯಾಗಲು ತೊಡಗುತ್ತದೆ. ಕಾಫಿಯಲ್ಲಿರುವ ಕೆಫೀನ್ ಮತ್ತು ಟೀಯಲ್ಲಿರುವ ಟ್ಯಾನಿನ್ ಅಂಶಗಳು ಹೆಚ್ಚು ಸಮಯ ಬಿಸಿಯಾಗಿದ್ದಾಗ ಅವುಗಳ ಆಮ್ಲೀಯತೆ ಹೆಚ್ಚಾಗುತ್ತದೆ. ಇಂತಹ ಪಾನೀಯವನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಪದೇ ಪದೇ ಕುಡಿಯುವುದರಿಂದ ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಜೀರ್ಣಕ್ರಿಯೆಯ ತೊಂದರೆಗಳು ಕಾಣಿಸಿಕೊಳ್ಳಬಹುದು.

ಫ್ಲಾಸ್ಕ್‌ನ ಗುಣಮಟ್ಟದ ಪಾತ್ರ

ನೀವು ಬಳಸುವ ಪ್ಲಾಸ್ಕ್ ಅತ್ಯಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಅಥವಾ ಕಳಪೆ ದರ್ಜೆಯ ಲೋಹದಿಂದ ಮಾಡಲ್ಪಟ್ಟಿದ್ದರೆ, ಬಿಸಿಯಾದ ಪಾನೀಯಗಳ ಸಂಪರ್ಕಕ್ಕೆ ಬಂದಾಗ ರಾಸಾಯನಿಕಗಳು ಬಿಡುಗಡೆಯಾಗಬಹುದು. ಇದು ದೇಹಕ್ಕೆ ವಿಷಕಾರಿಯಾಗಬಹುದು. ಯಾವಾಗಲೂ ಉತ್ತಮ ಗುಣಮಟ್ಟದ ‘ಫುಡ್ ಗ್ರೇಡ್’ ಸ್ಟೇನ್‌ಲೆಸ್ ಸ್ಟೀಲ್ ಫ್ಲಾಸ್ಕ್‌ಗಳನ್ನೇ ಆರಿಸಿಕೊಳ್ಲುವುದು ಉತ್ತಮ.

ಕೆಲವು ಪ್ರಮುಖ ಸಲಹೆಗಳು:

ಫ್ಲಾಸ್ಕ್‌ನಲ್ಲಿಟ್ಟ ಟೀ ಅಥವಾ ಕಾಫಿಯನ್ನು ಗರಿಷ್ಠ 2 ರಿಂದ 3 ಗಂಟೆಗಳ ಒಳಗಾಗಿ ಕುಡಿದು ಮುಗಿಸಿ. ಅದಕ್ಕಿಂತ ಹೆಚ್ಚು ಸಮಯ ಇಟ್ಟ ಪಾನೀಯವನ್ನು ಬಳಸಬಾರದು.

ಬ್ಲಾಕ್ ಟೀ, ಬ್ಲಾಕ್ ಕಾಫಿ ಅಥವಾ ಗ್ರೀನ್ ಟೀಗಳನ್ನು ಫ್ಲಾಸ್ಕ್‌ನಲ್ಲಿ ಇಡುವುದು ಹಾಲಿನ ಟೀ-ಕಾಫಿಗಿಂತ ಸ್ವಲ್ಪ ಹೆಚ್ಚು ಸುರಕ್ಷಿತ.

ಪ್ರತಿದಿನ ಫ್ಲಾಸ್ಕ್ ಅನ್ನು ಬಿಸಿ ನೀರು ಮತ್ತು ಲಿಕ್ವಿಡ್ ಸೋಪ್ ಬಳಸಿ ಚೆನ್ನಾಗಿ ತೊಳೆಯಬೇಕು. ಅದರ ಮುಚ್ಚಳದ ಒಳಗಿನ ರಬ್ಬರ್ ಭಾಗವನ್ನು ಬಿಡಿಸಿ ಸ್ವಚ್ಛಗೊಳಿಸುವುದನ್ನು ಮರೆಯಬಾರದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !