July 31, 2026
Friday, July 31, 2026
spot_img

ರಾಮಾಯಣ ಟ್ರೈಲರ್‌ ರಿಲೀಸ್‌ ಬೆನ್ನಲ್ಲೇ ಕಾಸ್ಟಿಂಗ್‌ ಬಗ್ಗೆ ಅಭಿಮಾನಿಗಳ ಬೇಸರ! ರಾಮ, ಸೀತೆ ಪಾತ್ರಕ್ಕೆ ಯಾರು ಬೆಸ್ಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆಯಷ್ಟೇ ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಇಡೀ ಸಿನಿಮಾದಲ್ಲಿ ಯಶ್‌, ಸಾಯಿಪಲ್ಲವಿ ಹಾಗೂ ರಣ್‌ಬೀರ್‌ ಕಪೂರ್‌ ರಾರಾಜಿಸಲಿದ್ದಾರೆ. ಎಫೆಕ್ಟ್ಸ್‌, ಡೈಲಾಗ್ಸ್‌ ಎಲ್ಲವೂ ಅದ್ಭುತ ಎಂದು ಜನ ಹೊಗಳಿದ್ದಾರೆ. ಆದರೆ ಸಿನಿಮಾದಲ್ಲಿ ಕಾಸ್ಟಿಂಗ್‌ ಚನ್ನಾಗಿಲ್ಲ ಅನ್ನೋದು ಹಲವರ ಅಭಿಪ್ರಾಯವಾಗಿದೆ.

https://www.instagram.com/p/DbbGQBEB_Ry/?igsh=MW93MmdxaG9ia3FpOQ==

ರಾಮನ ಪಾತ್ರಕ್ಕೆ ರಣ್‌ಬೀರ್‌ ಸೆಟ್‌ ಆಗ್ತಿಲ್ಲ ಹಾಗೇ ಸಾಯಿ ಪಲ್ಲವಿಯನ್ನು ಸೀತಾಮಾತೆಯಂತೆ ನೋಡೋದಕ್ಕೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಸ್ಟಿಂಗ್‌ ಬೇರೆ ಯಾರಾದ್ರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಪೋಸ್ಟ್ಸ್‌ ವೈರಲ್‌ ಆಗುತ್ತಿವೆ.

ರಾಮನ ಪಾತ್ರಕ್ಕೆ ನಟ ಮಹೇಶ್‌ ಬಾಬು, ವಿಕ್ಕಿ ಕೌಶಲ್‌, ಸುಶಾಂತ್‌ ಸಿಂಗ್‌ ರಜಪೂತ್‌ ಇದ್ದಿದ್ದರೆ ಅವರು ಬೆಸ್ಟ್‌ ಕಾಣಿಸುತ್ತಿದ್ದರು ಎಂದು ಹೇಳಲಾಗ್ತಿದೆ. ಇನ್ನು ಸೀತಾಮಾತೆಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಅಥವಾ ರುಕ್ಮಿಣಿ ವಸಂತ್‌ಗೆ ಚಾನ್ಸ್‌ ನೀಡಬೇಕಿತ್ತು ಎಂದು ಹೇಳಲಾಗುತ್ತಿದೆ.

https://www.instagram.com/reel/Dbag1WQIS-K/?igsh=MWZraDgzazg2d2txdA%3D%3D

ರಾವಣನ ಪಾತ್ರಕ್ಕೆ ಮಾತ್ರ ಯಾವ ನೆಗೆಟಿವ್‌ ಕಮೆಂಟ್ಸ್‌ ಕೂಡ ಬರುತ್ತಿಲ್ಲ. ಯಶ್‌ ಇಡೀ ಸಿನಿಮಾವನ್ನು ತೂಗಿಸಲಿದ್ದಾರೆ, ಅವರಿಗಾಗಿ ಸಿನಿಮಾ ನೋಡಬೇಕು ಎಂದು ಜನ ಕಮೆಂಟ್‌ ಮಾಡ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !