ಹೊಸದಿಗಂತ ಡಿಜಿಟಲ್ ಡೆಸ್ಕ್:
‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ ಅಂದ್ರೆ ಎಲ್ಲರಿಗೂ ಆ ಕ್ಯೂಟ್ ಸ್ಮೈಲ್, ಗ್ಲಾಮರಸ್ ರೋಲ್ಸ್‌ಗಳೇ ತಕ್ಷಣ ನೆನಪಿಗೆ ಬರೋದು. ಆದರೆ, ಭಾನುವಾರ ಸಂಜೆ ರಿಲೀಸ್ ಆಗಿರೋ ಅವರ ಹೊಸ ಪ್ಯಾನ್-ಇಂಡಿಯಾ ಸಿನಿಮಾ ‘ಮೈಸಾ’ ಟೀಸರ್ ನೋಡಿದೋರು ಗ್ಯಾರಂಟಿ ಶಾಕ್ ಆಗಿರ್ತಾರೆ. ಯಾಕಂದ್ರೆ, ಸಾಫ್ಟ್ ರಶ್ಮಿಕಾ ಇಲ್ಲಿ ಸಂಪೂರ್ಣವಾಗಿ ಮಾಸ್ ಆಕ್ಷನ್ ಹೀರೊ ತರ ಅವತಾರ ಎತ್ತಿ, ಎದುರಾಳಿಗಳನ್ನ ಧೂಳಿಪಟ ಮಾಡೋಕೆ ಅಖಾಡಕ್ಕಿಳಿದಿದ್ದಾರೆ.
ಟೀಸರ್ ಶುರುವಾಗೋದೇ ರಶ್ಮಿಕಾ ಅವರ ಡೀಪ್ ವಾಯ್ಸ್‌ನಿಂದ. “ನಾನು ದಣಿದಿದ್ದೇನೆ, ನಿಂತುಬಿಟ್ಟಿದ್ದೇನೆ, ಎಲ್ಲವನ್ನೂ ಸೋತಿದ್ದೇನೆ…” ಎಂದು ಅವರು ಮಾತಾಡೋ ಸೀನ್ ಒಂದು ಕ್ಷಣ ರೋಮಾಂಚನ ಅನಿಸುತ್ತೆ. ಆದರೆ, ಅಲ್ಲಿಗೆ ಕಥೆ ಮುಗಿಯಲ್ಲ. ಎಷ್ಟೇ ಕಷ್ಟ ಬಂದರೂ, ಸವಾಲುಗಳು ಎದುರಾದರೂ ಕಷ್ಟಕ್ಕೆ ಬೆನ್ನು ತೋರಿಸದೆ ಫೈಟ್ ಮಾಡೋ ಒಬ್ಬ ಗಟ್ಟಿಮುಟ್ಟಾದ ಹೆಣ್ಣಿನ ಕಥೆಯನ್ನ ಈ ಸಿನಿಮಾ ತೋರಿಸುತ್ತೆ. ಈ ಚಿತ್ರದಲ್ಲಿ ರಶ್ಮಿಕಾ ‘ಗೊಂಡ್’ ಬುಡಕಟ್ಟು ಜನಾಂಗದ ಹೆಣ್ಣುಮಗಳಾಗಿ ಅಭಿನಯಿಸುತ್ತಿದ್ದಾರೆ.
ರಗಡ್ ಆಕ್ಷನ್ ಮ್ಯಾಜಿಕ್
ಟೀಸರ್‌ನಲ್ಲಿ ರಶ್ಮಿಕಾ ಕೈಯಲ್ಲಿ ಲಾಂಗ್-ಕತ್ತಿ ಹಿಡಿದು ವಿಲನ್‌ಗಳ ಕೈ-ಕಾಲು ಕತ್ತರಿಸೋದು, ಕಾಲಿನಿಂದ ಎದುರಾಳಿಗಳ ಕತ್ತು ಮುರಿಯೋ ಸೀನ್‌ಗಳೆಲ್ಲ ರಕ್ತ ಕುದಿಯುವಂತೆ ಮಾಡುತ್ತದೆ. ಬೈಕ್ ರೈಡ್ ಮಾಡೋದಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ ನೀರಿನ ಅಡಿಯಲ್ಲೇ ಶತ್ರುಗಳ ಜತೆ ಕಾದಾಡೋ ದೃಶ್ಯ ನಿಜಕ್ಕೂ ಗೂಸ್‌ಬಂಪ್ಸ್ ಕೊಡುತ್ತೆ.
ಫ್ಯಾನ್ಸ್ ದಿಲ್ ಫುಲ್ ಖುಷ್
ಟೀಸರ್ ನೋಡಿದ ಸಿನಿರಸಿಕರು ರಶ್ಮಿಕಾ ಅವರ ಈ ಬೆಂಕಿ ಅವತಾರಕ್ಕೆ ಫುಲ್ ಫಿದಾ ಆಗಿದ್ದಾರೆ. ಯೂಟ್ಯೂಬ್‌ನಲ್ಲಿ ಯೂಸರ್ ಒಬ್ಬರು, “ಫೀಮೇಲ್ ಲೀಡ್ ಸಿನಿಮಾ ಅಂದ್ರೆ ಹೀಗಿರಬೇಕು!” ಎಂದು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು, “ಇದೇ ಮೊದಲ ಬಾರಿಗೆ ಒಬ್ಬ ಹೀರೋಯಿನ್‌ಗೆ ಬರೀ ಗ್ಲಾಮರ್‌ಗೆ ಜಾಗ ಕೊಡದೆ, ಅವರಲ್ಲಿರೋ ನಟನಾ ರಾಕ್ಷಸಿಗೆ ಜಾಗ ಕೊಟ್ಟಿದ್ದಾರೆ” ಎಂದು ಹೊಗಳಿದ್ದಾರೆ. ಇನ್ನು ಕೆಲವರಂತೂ ‘ಮೈಸಾ’ ಪಕ್ಕಾ ಬ್ಲಾಕ್‌ಬಸ್ಟರ್ ಆಗೋದ್ರಲ್ಲಿ ಡೌಟೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಒಟ್ಟಿನಲ್ಲಿ, ‘ಮೈಸಾ’ ಟೀಸರ್ ಮೂಲಕ ರಶ್ಮಿಕಾ ಮಂದಣ್ಣ ತಾನೊಬ್ಬ ಬರೀ ಕ್ಯೂಟ್ ನಟಿ ಅಷ್ಟೇ ಅಲ್ಲ, ರಗಡ್ ಆಕ್ಷನ್ ಹೀರೋ ಆಗಿಯೂ ಬಾಕ್ಸ್ ಆಫೀಸ್ ಧೂಳೆಬ್ಬಿಸಬಲ್ಲೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.



