September 23, 2026
Wednesday, September 23, 2026
spot_img

ಐವರು ಸಜಾಬಂಧಿಗಳಿರುವ ಬ್ಯಾರಕ್‌ಗೆ ಶಿಫ್ಟ್‌ ಆದ ಪವಿತ್ರಾ ಗೌಡ: ಇಂದು ಜಾಮೀನು ಅರ್ಜಿ ವಿಚಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಾರನ್ನು ಐವರು ಸಜಾಬಂಧಿಗಳಿರುವ ಬ್ಯಾರಕ್‌ಗೆ ಶಿಫ್ಟ್‌ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಕೂಡ ಇದ್ದಾರೆ. ಅವರ ಬ್ಯಾರಕ್‌ನಲ್ಲಿ ಮೊಬೈಲ್‌ ಬಳಕೆ ಮಾಡುತ್ತಿರುವ ಶಂಕೆ ಹಿನ್ನೆಲೆ ಚೆಕಿಂಗ್‌ ಮಾಡಲಾಗಿತ್ತು. ಶಂಕೆಯಂತೆಯೇ ಫೋನ್‌ ಕೂಡ ಸಿಕ್ಕಿತ್ತು.ಇದೇ ವೇಳೆ ಪವಿತ್ರಾ ಗೌಡರನ್ನು ಹತ್ತಕ್ಕೂ ಹೆಚ್ಚು ಸಜಾಬಂಧಿಗಳಿರುವ ಬ್ಯಾರಕ್‌ಗೆ ಶಿಫ್ಟ್‌ ಮಾಡಲಾಗಿತ್ತು.

ಒಂದೇ ಬಾತ್‌ರೂಂ ಶೇರ್‌ ಮಾಡೋಕಾಗಲ್ಲ

ಹಲವು ಅಪರಾಧಿಗಳಿರುವ ಬ್ಯಾರಕ್‌ನಲ್ಲಿ ಒಂದೇ ಬಾತ್‌ರೂಮ್‌ ಇತ್ತು. ಅದು ಗಲೀಜಾಗಿತ್ತು, ಹೈಜಿನ್‌ ಇಲ್ಲ, ಆರೋಗ್ಯ ಸಮಸ್ಯೆಯ ಭಯವಾಗ್ತಿದೆ ಎಂದು ಪವಿತ್ರಾ ಹೇಳಿದ್ದರು. ತದನಂತರ ವಿಚಾರಣೆ ನಡೆಯುತ್ತಿದೆ. ಈ ವೇಳೆ ಇತರ ಅಪರಾಧಿಗಳು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಕೇಳಿದ್ದರು. ಹೀಗಾಗಿ ಸೌಲಭ್ಯ ಹಾಗೂ ಸ್ವಚ್ಛತೆ ಇರುವ ಬ್ಯಾರಕ್‌ಗೆ ಪವಿತ್ರಾರನ್ನು ಶಿಫ್ಟ್‌ ಮಾಡುವಂತೆ ಸೆಷನ್ಸ್‌ ಕೋರ್ಟ್‌ ಸೂಚನೆ ನೀಡಿತ್ತು.

ಜಾಮೀನು ಅರ್ಜಿ ವಿಚಾರಣೆ

ಜಾಮೀನು ನೀಡಬೇಕು ಎಂದು ಪವಿತ್ರಾ ಪರ ವಕೀಲರು ಸಿಸಿಎಚ್ 59ರ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಅವರಿಗೆ ಜಾಮೀನು ಸಿಗುತ್ತದಾ ಇಲ್ಲವಾ ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಇದೇ ಮೊದಲ ಬಾರಿಗೆ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಜೊತೆಗೆ ಮತ್ತಿಬ್ಬರ ಆರೋಪಿಗಳ ಜಾಮೀನು ಅರ್ಜಿಯೂ ವಿಚಾರಣೆಗೆ ಬರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !