July 31, 2026
Friday, July 31, 2026
spot_img

ಲಂಚ್ ರೆಡಿ ಮಾಡಲು ಟೈಮ್ ಇಲ್ವಾ? ಮಧ್ಯಾಹ್ನದ ಊಟಕ್ಕೆ 10 ನಿಮಿಷದಲ್ಲೇ ಸಿದ್ಧವಾಗುತ್ತೆ ಈ ಎಗ್‌ ಬುರ್ಜಿ

ಎಗ್ ಬುರ್ಜಿ ಬ್ಯಾಚುಲರ್ಸ್‌ಗೆ ಮತ್ತು ಅಡುಗೆಯನ್ನು ಬೇಗನೆ ಮುಗಿಸಬೇಕಾದವರಿಗೆ ಅತ್ಯಂತ ಪ್ರಿಯವಾದ ಡಿಶ್. ಇದು ಚಪಾತಿ, ರೊಟ್ಟಿ, ಬ್ರೆಡ್ ಅಥವಾ ಬಿಸಿ ಅನ್ನದ ಜತೆಗೆ ತಿನ್ನಲು ಅದ್ಭುತವಾದ ಕಾಂಬಿನೇಷನ್ ಆಗಿದೆ. ಇದನ್ನು ಕೇವಲ 10 ರಿಂದ 15 ನಿಮಿಷಗಳಲ್ಲಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ಮೊಟ್ಟೆ

ಈರುಳ್ಳಿ

ಟೊಮೆಟೊ

ಹಸಿ ಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಅಚ್ಚಖಾರದ ಪುಡಿ

ಅರಶಿನ ಪುಡಿ

ಗರಂ ಮಸಾಲಾ ಪುಡಿ

ಜೀರಿಗೆ

ಎಣ್ಣೆ ಅಥವಾ ಬೆಣ್ಣೆ

ಉಪ್ಪು

ಕೊತ್ತಂಬರಿ ಸೊಪ್ಪ

ಮಾಡುವ ವಿಧಾನ:

ಮೊದಲು ಒಂದು ಪ್ಯಾನ್ ಅಥವಾ ಬಾಂಡ್ಲಿಗೆ ಎಣ್ಣೆ ಅಥವಾ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ ಮತ್ತು ಹಸಿ ಮೆಣಸಿನಕಾಯಿ ಹಾಕಿ ಸೆಕೆಂಡುಗಳ ಕಾಲ ಹುರಿಯಬೇಕು. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಅದು ತಿಳಿ ಗುಲಾಬಿ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದು. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ಬಳಿಕ ಟೊಮೆಟೊ ಹಾಕಿ, ಟೊಮೆಟೊ ಬೆಂದ ನಂತರ ಉಪ್ಪು, ಅರಿಶಿನ ಪುಡಿ, ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ 1 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಬೇಕು.

ಬಳಿಕ ಉರಿಯನ್ನು ಕಡಿಮೆ ಮಾಡಿ, ಮಸಾಲೆಯ ಮಧ್ಯೆ ಸ್ವಲ್ಪ ಜಾಗ ಮಾಡಿ ಮೊಟ್ಟೆಗಳನ್ನು ಒಡೆದು ಹಾಕಿ. ತಕ್ಷಣವೇ ಎಲ್ಲವನ್ನೂ ಚೆನ್ನಾಗಿ ಕೈಡಿಸಲು ಆರಂಭಿಸಿ. ಮೊಟ್ಟೆ ಮತ್ತು ಮಸಾಲೆ ಒಂದಕ್ಕೊಂದು ಚೆನ್ನಾಗಿ ಬೆರೆಯಬೇಕು. ಮೊಟ್ಟೆ ಗಟ್ಟಿಯಾಗುತ್ತಾ ಬರುವಾಗ ಸಣ್ಣ ಸಣ್ಣ ಚೂರುಗಳಾಗುವಂತೆ ಸೌಟಿನಿಂದ ಕೈಡಿಸುತ್ತಿರಬೇಕು. ಮೊಟ್ಟೆ ಸಂಪೂರ್ಣವಾಗಿ ಬೆಂದು, ಉದುರು ಉದುರಾಗುವವರೆಗೆ 3-4 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲಿಂದ ಉದುರಿಸಿ ಮಿಕ್ಸ್ ಮಾಡಿದರೆ ಬಿಸಿಬಿಸಿ ಎಗ್ ಬುರ್ಜಿ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !