ಹೊ೦ಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮೂರು ಪ್ರಮುಖ ಯೋಜನೆಗಳಿಂದ ಪರಿಸರಕ್ಕೆ ಭೀಕರ ಧಕ್ಕೆ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿ ನಟ ಚೇತನ್ ಅಹಿಂಸಾ ಮತ್ತು 29 ಪರಿಸರ ಕಾರ್ಯಕರ್ತರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಪರಿಸರ ನಾಶಕ್ಕೆ ಕಾರಣವಾಗಲಿರುವ ಯೋಜನೆಗಳು:
ರಾಜ್ಯದ ಮೇಕೆದಾಟು ಯೋಜನೆ, ಬಿದಡಿ ಕೈಗಾರಿಕಾ ಕಾರಿಡಾರ್ ಮತ್ತು ಪಶ್ಚಿಮ ಘಟ್ಟಗಳ ಅರಣ್ಯ ನಾಶಕ್ಕೆ ಕಾರಣವಾಗುವ ಯೋಜನೆಗಳ ವಿರುದ್ಧ ಪತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಕಾಂಗ್ರೆಸ್ನ ದ್ವಂದ್ವ ನಿಲುವಿಗೆ ಪ್ರಶ್ನೆ:
ಕಾಂಗ್ರೆಸ್ ಸರ್ಕಾರವೇ ಇಂತಹ ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಆಕ್ಷೇಪಿಸಿರುವ ‘ಟೀಮ್ ಅಹಿಂಸಾ’ ಮತ್ತು ನಾಗರಿಕರು, ಹವಾಮಾನ ವೈಪರೀತ್ಯದ ಈ ಕಾಲದಲ್ಲಿ ಇವುಗಳಿಗೆ ಬ್ರೇಕ್ ಹಾಕಬೇಕು ಎಂದು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಈ ಪತ್ರದ ವಿಡಿಯೋ ಹಾಗೂ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಕರ್ನಾಟಕದ ಪರಿಸರ ರಕ್ಷಣೆಗಾಗಿ ರಾಷ್ಟ್ರೀಯ ನಾಯಕರು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಲಾಗಿದೆ.



