ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದು, ಅದ್ಧೂರಿ ಸ್ವಾಗತ ಸಿಕ್ಕಿದೆ.
ನಾನು ನಿಮ್ಮೂರಿನ ಅಳಿಯ, ಈ ಬಾರಿ ಮತ್ತೊಮ್ಮೆ ಬಲಿಷ್ಠ ಸರ್ಕಾರ ರಚನೆ ಮಾಡಲು ಎಲ್ಲರೂ ಅವಕಾಶ ಮಾಡಿಕೊಡಬೇಕು. ನನಗೆ ಕನಕಪುರ ಬೇರೆ ಅಲ್ಲ, ಮೈಸೂರು ಬೇರೆಅಲ್ಲ. ನಾನು ಮುಖ್ಯಮಂತ್ರಿ ಇರಬಹುದು ಆದರೆ ಮೂಸೂರಿನ ಅಳಿಯ ಅನ್ನೋದನ್ನು ಮರೆಯಬೇಡಿ ಎಂದಿದ್ದಾರೆ.
ಇಷ್ಟೊಂದು ಜನ ನನಗೆ ಸ್ವಾಗತ ಕೋರಲು ಆಗಮಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ಈ ಹಿಂದೆ ನಾನು ಹಾಗೂ ಸಿದ್ದರಾಮಯ್ಯ ಇಡೀ ರಾಜ್ಯ ಪ್ರವಾಸ ಮುಗಿಸಿ ಗೆಲುವು ಸಾಧಿಸಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದಿದ್ದೆವು. ನಿಮ್ಮ ಆಶೀರ್ವಾದವೂ ನಮಗೆ ಮುಖ್ಯ. ಬೆಲೆ ಏರಿಕೆಯಿಂದ ಜನರ ಆದಾಯ ಕುಸಿದಿದ್ದ ಸಂದರ್ಭದಲ್ಲಿ ನಾವು ನೀಡಿದ ಗ್ಯಾರಂಟಿ ಯೋಜನೆಗಳು ಇಂದು ದೇಶಕ್ಕೇ ಮಾದರಿಯಾಗಿವೆ.
ಪ್ರಧಾನಿ ಭೇಟಿ ಹಿನ್ನೆಲೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಭದ್ರತಾ ಕಾರಣಗಳಿಂದ ಸಭೆ ರದ್ದಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸುತ್ತೇವೆ ಎಂದು ತಿಳಿಸಿದರು.



