March 25, 2026
Wednesday, March 25, 2026
spot_img

ಶಿವಾಜಿನಗರ ಮೆಟ್ರೋ ರೈಲು ನಿಲ್ದಾಣ ಬದಲಾವಣೆ: ಕರ್ನಾಟಕ ಸರಕಾರ ವಿರುದ್ಧ ‘ಮಹಾ’ ಸಿಎಂ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಶಿವಾಜಿನಗರ ಮೆಟ್ರೋ ರೈಲು ನಿಲ್ದಾಣದ ಹೆಸರನ್ನು ಸೇಂಟ್‌ ಮೇರಿ ನಿಲ್ದಾಣದ ಎಂದು ಬದಲಾಯಿಸಲು ತೀರ್ಮಾನ ಮಾಡಿರುವ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡುವ ಅವಮಾನ ಎಂದು ಹೇಳಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸೇಂಟ್ ಮೇರಿ ಬೆಸಿಲಿಕಾದಲ್ಲಿ ನಡೆದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಜನರ ಮನವಿಯ ಮೇರೆಗೆ ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡುವ ಬಗ್ಗೆ ತಮ್ಮ ಸರ್ಕಾರ ಪರಿಗಣಿಸುವುದಾಗಿ ಹೇಳಿದ್ದರು.

ಇದೀಗ ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು ಸೇಂಟ್ ಮೇರಿ ನಿಲ್ದಾಣ ಎಂದು ಹೆಸರಿಡುವ ಕರ್ನಾಟಕ ಸರ್ಕಾರದ ಕ್ರಮವನ್ನು ನಾನು ಖಂಡಿಸುತ್ತೇನೆ. ಇದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ’ ಎಂದು ಫಡ್ನವೀಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನೆಹರೂ ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ ಶಿವಾಜಿ ಮಹಾರಾಜರ ವಿರುದ್ಧ ಟೀಕೆಗಳನ್ನು ಮಾಡಿದ ಕಾಲದಿಂದಲೂ ಕಾಂಗ್ರೆಸ್ ಮರಾಠ ರಾಜನನ್ನು ಅವಮಾನಿಸುವ ಸಂಪ್ರದಾಯವನ್ನು ಮುಂದುವರೆಸಿದೆ. ಧರ್ಮವನ್ನು ಆಧರಿಸಿದ ಮತ್ತು ಮರಾಠ ರಾಜನ ವಿರುದ್ಧವಾದ ಇಂತಹ ನಿರ್ಧಾರವನ್ನು ಮುಂದುವರಿಸದಂತೆ ಸರ್ವಶಕ್ತನು ಸಿದ್ದರಾಮಯ್ಯನವರಿಗೆ ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಫಡ್ನವೀಸ್ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !