Thursday, September 11, 2025

ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರನೊಬ್ಬ ಸಿಡಿಲು ಬಡಿದು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರನೊಬ್ಬ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರಿನ ತುಂಗಾಭದ್ರಾ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ದೇವಪ್ಪ (42) ಎಂದು ಗುರುತಿಸಲಾಗಿದೆ. ತುಂಗಾಭದ್ರಾ ನದಿಯಲ್ಲಿ ಮೀನು ಹಿಡಿಯುವ ವೇಳೆ ಸಿಡಿಲು ಬಡಿದಿದೆ. ತೆಪ್ಪದಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಈ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ