May 3, 2026
Sunday, May 3, 2026
spot_img

CINE | OTTಗೆ ಬರ್ತಿದೆ ‘ಲವ್ ಮಾಕ್ಟೇಲ್ 3’: ನೋಡೋಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮಾಕ್ಟೇಲ್ 3’ ಇದೀಗ ಒಟಿಟಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಭಾವನಾತ್ಮಕ ಕಥಾಹಂದರದ ಮೂಲಕ ಗಮನ ಸೆಳೆದ ಈ ಸಿನಿಮಾ, ಮೇ 8ರಿಂದ ಡಿಜಿಟಲ್ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

‘ಲವ್ ಮಾಕ್ಟೇಲ್’ ಸರಣಿಯ ಯಶಸ್ಸನ್ನು ಮುಂದುವರಿಸಿದ ಈ ಮೂರನೇ ಭಾಗದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತೆ ನಾಯಕನಾಗಿ ಕಾಣಿಸಿಕೊಂಡಿದ್ದು, ನಿರ್ದೇಶನದ ಹೊಣೆಗಾರಿಕೆಯನ್ನು ಕೂಡ ನಿರ್ವಹಿಸಿದ್ದಾರೆ. ಮಿಲನಾ ನಾಗರಾಜ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ಸಿನಿಮಾದ ಕಥೆ ತಂದೆ-ಮಗಳ ಮಮತೆಯ ಸುತ್ತ ಹೆಣೆದಿದ್ದು, ಆದಿತ್ಯ ಮತ್ತು ದತ್ತು ಮಗಳು ನಿಧಿಯ ನಡುವಿನ ಬಾಂಧವ್ಯವನ್ನು ಮನಮುಟ್ಟುವಂತೆ ತೆರೆದಿಡುತ್ತದೆ. ಅವರ ದಿನಚರಿ, ಸಂತೋಷದ ಕ್ಷಣಗಳು ಮತ್ತು ಬಳಿಕ ಎದುರಾಗುವ ಭಾವನಾತ್ಮಕ ತಿರುವು ಕಥೆಗೆ ಮತ್ತಷ್ಟು ತೂಕ ನೀಡುತ್ತದೆ.

ಚಿತ್ರಮಂದಿರದಲ್ಲಿ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ, ಈಗ ಒಟಿಟಿಯಲ್ಲಿ ಕುಟುಂಬ ಸಮೇತ ಕುಳಿತು ನೋಡುವ ಮತ್ತೊಂದು ಮನಸಿಗೆ ಹತ್ತಿರವಾಗುವ ಅನುಭವ ನೀಡುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !