August 1, 2026
Saturday, August 1, 2026
spot_img

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಅಮೆರಿಕ ನಾಗರಿಕರಿಗೆ ತುರ್ತು ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ತನ್ನ ನಾಗರಿಕರಿಗೆ ತುರ್ತು ಭದ್ರತಾ ಎಚ್ಚರಿಕೆ ನೀಡಿದೆ.

ಜೋರ್ಡಾನ್, ಇಸ್ರೇಲ್ ಹಾಗೂ ಇರಾಕ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳು, ಪರಿಸ್ಥಿತಿ ಹದಗೆಡುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದರೆ ತಕ್ಷಣ ದೇಶ ತೊರೆಯಲು ಸಿದ್ಧರಾಗುವಂತೆ ಸೂಚಿಸಿವೆ.

ಇದನ್ನೂ ಓದಿ:

ಭದ್ರತಾ ಸೂಚನೆಯಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ, ವಾಯುಪ್ರದೇಶ ತಾತ್ಕಾಲಿಕ ಬಂದ್ ಹಾಗೂ ಪ್ರಯಾಣ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಸ್ಥಳೀಯ ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಮೆರಿಕ ನಾಗರಿಕರಿಗೆ ಮನವಿ ಮಾಡಲಾಗಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಸಮೀಪ ಹೋಗದಂತೆ ಹಾಗೂ ಇಸ್ರೇಲ್‌ನಲ್ಲಿ ಸಮೀಪದ ಬಾಂಬ್ ಶೆಲ್ಟರ್‌ಗಳ ಸ್ಥಳವನ್ನು ಮುಂಚಿತವಾಗಿ ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ. ಇದೇ ವೇಳೆ ಇರಾನ್, ಅಮೆರಿಕದ ಕ್ರಮಗಳು ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಆರೋಪಿಸಿ, ಅಮೆರಿಕಕ್ಕೆ ಬೆಂಬಲ ನೀಡುವ ರಾಷ್ಟ್ರಗಳಿಗೂ ಎಚ್ಚರಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !