ಇಂದಿನ ವೇಗದ ಜೀವನದಲ್ಲಿ ಮಾನಸಿಕ ಒತ್ತಡ ಸಾಮಾನ್ಯ ಎನ್ನಿಸಿಕೊಂಡಿದೆ. ಆದರೆ ನಮ್ಮ ದೈನಂದಿನ ಕೆಲವು ಸಣ್ಣ ಅಭ್ಯಾಸಗಳೇ ಒತ್ತಡ, ಆತಂಕ ಮತ್ತು ಮಾನಸಿಕ ದಣಿವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸಿಕೊಂಡರೆ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.
ದಿನವಿಡೀ ಮೊಬೈಲ್ ಬಳಸುವುದು
ಅಗತ್ಯಕ್ಕಿಂತ ಹೆಚ್ಚು ಸಮಯ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವುದರಿಂದ ಒತ್ತಡ, ಹೋಲಿಕೆ ಮನೋಭಾವ ಮತ್ತು ಆತಂಕ ಹೆಚ್ಚಾಗಬಹುದು. ದಿನಕ್ಕೆ ಸ್ವಲ್ಪ ಸಮಯವಾದರೂ ಡಿಜಿಟಲ್ ಡಿಟಾಕ್ಸ್ ಮಾಡುವುದು ಉತ್ತಮ.
ಸಾಕಷ್ಟು ನಿದ್ರೆ ಮಾಡದಿರುವುದು
ಕಡಿಮೆ ನಿದ್ರೆ ಮನಸ್ಸಿನ ಏಕಾಗ್ರತೆ ಕಡಿಮೆ ಮಾಡುತ್ತದೆ. ಜೊತೆಗೆ ಕಿರಿಕಿರಿ, ಕೋಪ ಮತ್ತು ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಳ್ಳುವುದು
ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ಮನಸ್ಸಿನಲ್ಲೇ ಇಟ್ಟುಕೊಂಡರೆ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗಬಹುದು. ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತನಾಡುವುದು ಸಹಾಯಕ.



