August 2, 2026
Sunday, August 2, 2026
spot_img

194 ವರ್ಷ ಬಾಳಲಿದ್ದಾನೆ ಮನುಷ್ಯ? ವಯಸ್ಸಾಗುವಿಕೆಗೆ ಬ್ರೇಕ್ ಹಾಕಲು ರಷ್ಯಾ ವಿಜ್ಞಾನಿಗಳ ಹೊಸ ತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನುಷ್ಯ ನೂರಾರು ವರ್ಷ ಬದುಕಲು ಸಾಧ್ಯವೇ ಎಂಬ ಪ್ರಶ್ನೆಗೆ ರಷ್ಯಾದ ‘ಸ್ಕೋಲ್ಕೊವೊ ಸೈನ್ಸ್ ಅಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್’ ಶೋಧಕರು ಹೌದು ಎಂದಿದ್ದಾರೆ. ಗಣಿತದ ಮಾಡೆಲಿಂಗ್ ಹಾಗೂ ಡಿಎನ್‌ಎ ಸಂಶೋಧನೆಗಳ ಪ್ರಕಾರ, ಮಾನವನ ಆಯುಷ್ಯವನ್ನು ಕನಿಷ್ಠ 194 ವರ್ಷಗಳವರೆಗೆ ವಿಸ್ತರಿಸಬಹುದು. ಈ ಅದ್ಭುತ ವರದಿಯು ಪ್ರಸಿದ್ಧ ‘NPG ಏಜಿಂಗ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ವಯಸ್ಸಾಗುವಿಕೆ ತಡೆ ಮತ್ತು ಅಂಗಾಂಗ ಕಸಿ

ವಯಸ್ಸಾದಂತೆ ದೇಹದ ಜೀವಕೋಶಗಳು ಮತ್ತು ಡಿಎನ್‌ಎ ಹಾನಿಗೊಳಗಾಗುತ್ತವೆ. ಇದನ್ನು ಸರಿಪಡಿಸಲು ಜೀನ್ ಚಿಕಿತ್ಸೆ ಸಹಕಾರಿ. ಅಲ್ಲದೆ, ‘3D ಬಯೋಪ್ರಿಂಟಿಂಗ್’ ಮೂಲಕ ಕೃತಕ ಅಂಗಗಳನ್ನು ಸೃಷ್ಟಿಸುವುದು ಹಾಗೂ ‘ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್’ (ಹಂದಿಗಳ ತಳೀಯವಾಗಿ ಬದಲಾಯಿಸಿದ ಅಂಗಗಳನ್ನು ಮನುಷ್ಯರಿಗೆ ಜೋಡಿಸುವುದು) ತಂತ್ರಜ್ಞಾನ ಬಳಸಿ ಸಾವನ್ನು ಮುಂದೂಡಬಹುದು ಎಂದು ವಿಜ್ಞಾನಿಗಳು ನಿರೂಪಿಸಿದ್ದಾರೆ.

ಜಾಗತಿಕ ನಾಯಕರ ಚರ್ಚೆ ಹಾಗೂ ರಷ್ಯಾದ ಮಾಸ್ಟರ್ ಪ್ಲಾನ್

ಚೀನಾದ ಮಿಲಿಟರಿ ಕಾರ್ಯಕ್ರಮವೊಂದರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಮತ್ತು ಉತ್ತರ ಕೊರಿಯಾ ನಾಯಕರೊಂದಿಗೆ ಮಾತನಾಡುತ್ತಾ, “ಅಂಗಾಂಗಗಳ ನಿರಂತರ ಬದಲಾವಣೆಯಿಂದ ಮನುಷ್ಯ ದೀರ್ಘಕಾಲ ಜೀವಿಸಬಹುದು” ಎಂದಿದ್ದರು. ಇದರ ಬೆನ್ನಲ್ಲೇ ರಷ್ಯಾ ಸರ್ಕಾರವು ವಯಸ್ಸಾಗುವಿಕೆಯನ್ನು ತಡೆಯಲು $26 ಬಿಲಿಯನ್ (ಸುಮಾರು $2,600 ಕೋಟಿ) ವೆಚ್ಚದ ಬೃಹತ್ ಯೋಜನೆಯನ್ನು ಘೋಷಿಸಿದೆ. 2030ರ ವೇಳೆಗೆ ನಾಗರಿಕರ ಆಯುಷ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !