August 2, 2026
Sunday, August 2, 2026
spot_img

ತೈಪೆನಲ್ಲಿ ಭಾರತದ ಯುವ ಸಂಚಲನ: ಅದ್ಭುತ ಪ್ರದರ್ಶನದೊಂದಿಗೆ ಓಪನ್ ಬ್ಯಾಡ್ಮಿಂಟನ್‌ ವಶಪಡಿಸಿಕೊಂಡ ತನ್ವಿ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಯುವ ಬ್ಯಾಡ್ಮಿಂಟನ್ ತಾರೆ ತನ್ವಿ ಶರ್ಮಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ. ತೈಪೆ ಓಪನ್ ಸೂಪರ್ 300 ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು, ಭಾರತೀಯ ಬ್ಯಾಡ್ಮಿಂಟನ್‌ಗೆ ಹೊಸ ಹೆಮ್ಮೆಯ ಕ್ಷಣವನ್ನು ತಂದಿದ್ದಾರೆ.

ಫೈನಲ್‌ನಲ್ಲಿ ವಿಶ್ವದ 21ನೇ ಶ್ರೇಯಾಂಕದ ಆಟಗಾರ್ತಿಯನ್ನು 21-16, 21-16 ನೇರ ಸೆಟ್‌ಗಳಿಂದ ಮಣಿಸಿದ ತನ್ವಿ ಕೇವಲ 36 ನಿಮಿಷಗಳಲ್ಲಿ ಪಂದ್ಯ ಮುಗಿಸಿದರು. ಇದರೊಂದಿಗೆ ತೈಪೆ ಓಪನ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡರು.

ಸೈನಾ ಬಳಿಕ ಮತ್ತೊಬ್ಬ ಭಾರತೀಯೆ

2008ರಲ್ಲಿ ಸೈನಾ ನೆಹ್ವಾಲ್ ಬಳಿಕ ತೈಪೆ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ತನ್ವಿ ಪಾತ್ರರಾದರು. ಟೂರ್ನಿಯುದ್ದಕ್ಕೂ ಒಂದೇ ಒಂದು ಗೇಮ್ ಮಾತ್ರ ಕಳೆದುಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದರು.

ಕೋಚ್‌ಗೆ ಪದಕ ಅರ್ಪಿಸಿದ ತನ್ವಿ

ಗೆಲುವಿನ ಬಳಿಕ ಚಿನ್ನದ ಪದಕವನ್ನು ತಮ್ಮ ಕೋಚ್ ಪಾರ್ಕ್ ಟೇ-ಸಾಂಗ್ ಅವರ ಕೊರಳಿಗೆ ಹಾಕಿ ಗೌರವ ಸಲ್ಲಿಸಿದ ತನ್ವಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವರ ಈ ಸಾಧನೆಗೆ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !