August 3, 2026
Monday, August 3, 2026
spot_img

ಬೈಕ್‌ಗೆ ನೇತು ಹಾಕಿದ್ದ ಬ್ಯಾಗ್ ಕಳವು:3 ಲಕ್ಷ ರೂ ನಗದು ಹೊತ್ತೊಯ್ದ ಖದೀಮರು

ಹೊಸದಿಗಂತ ವರದಿ ಉತ್ತರಕನ್ನಡ:

ಬೈಕ್‌ಗೆ ನೇತು ಹಾಕಿದ್ದ ಕೈ ಚೀಲದಿಂದ 3 ಲಕ್ಷ ರೂ. ನಗದು, ಕೆನರಾ ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಕಳ್ಳತನವಾಗಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಸಮೀಪದ ಅಂಡಗಿ ಗ್ರಾಮದ ನಿವಾಸಿ ಹಬೀಬ್ ರೇಹಮಾನ್ ಗಫೂರ್ ಸಾಬ್ ಅವರು ನೀಡಿದ ದೂರಿನಂತೆ, ಅವರು ತಮ್ಮ ಮೋಟಾರ್ ಸೈಕಲ್ ಕೆ.ಎ.31 ಆರ್ 7420 ಮೂಲಕ ಬನವಾಸಿಯ ಕೆನರಾ ಬ್ಯಾಂಕ್ ಶಾಖೆಗೆ ಬಂದು ತಮ್ಮ ಖಾತೆಯಿಂದ 3 ಲಕ್ಷ ರೂ. ಹಣವನ್ನು ಹಿಂಪಡೆದಿದ್ದರು. ನಗದು ಹಣದೊಂದಿಗೆ ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟು, ಅದನ್ನು ಕೈಚೀಲದಲ್ಲಿ ಹಾಕಿ ಬೈಕ್‌ನ ಎಡಭಾಗದ ಕಬ್ಬಿಣದ ಹುಕ್‌ಗೆ ನೇತು ಹಾಕಿಕೊಂಡು ಅಂಗಡಿ ಕಡೆಗೆ ಹೊರಟಿದ್ದರು.

ಬನವಾಸಿಯ ದಾಸನಕೊಪ್ಪ ಕ್ರಾಸ್ ಬಳಿ ಮನೆಗೆ ತಿಂಡಿ-ತಿನಿಸು ತೆಗೆದುಕೊಂಡು ಹೋಗುವ ಉದ್ದೇಶದಿಂದ ಬೈಕ್ ಅನ್ನು ಮರಳಿ ತಿರುಗಿಸಿ ಕದಂಬ ಸರ್ಕಲ್ ಸಮೀಪದ ಎಸ್.ಎಲ್. ಅಯ್ಯಂಗಾರ್ ಬೇಕರಿ ಎದುರು ನಿಲ್ಲಿಸಿ ಅಂಗಡಿಗೆ ತೆರಳಿದ್ದರು. ಬೇಕರಿಯಿಂದ ಹಿಂದಿರುಗಿ ನೋಡಿದಾಗ, ಬೈಕ್‌ಗೆ ಹಾಕಿದ್ದ ಕೈಚೀಲ ಕಾಣೆಯಾಗಿದ್ದು, ಅದರೊಳಗಿದ್ದ 3 ಲಕ್ಷ ರೂ. ನಗದು, ಕೆನರಾ ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಅನ್ನು ಯಾರೋ ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !