ಹೊಸದಿಗಂತ ಶಿವಮೊಗ್ಗ:
ಇಲ್ಲಿನ ಹೊಸನಗರದ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಭಾರತಿ ಟ್ರಸ್ಟ್, ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆ ಹಾಗೂ ರಾಷ್ಟ್ರೋತ್ಥಾನ ಬಳಗದ ವತಿಯಿಂದ ಪ್ರಥಮ ಸುದ್ದಿವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ಪತ್ರಿಕಾ ಕ್ಷೇತ್ರದ ಸಾಧಕರಿಗೆ ‘ನಾರದ ಪುರಸ್ಕಾರ’ ಪ್ರದಾನ ಮಾಡಲಾಯಿತು.
‘ಹೊಸದಿಗಂತ’ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ವಾದಿರಾಜ ಕಮರೂರು, ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ, ‘ಕನ್ನಡ ನ್ಯೂಸ್’ ಸಂಪಾದಕ ರಘುಪತಿ ಯಾಜಿ, ಪರಿಸರ ಪತ್ರಕರ್ತ ರಘುನಂದನ ಭಟ್, ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಸುಧೀಂದ್ರ, ಹಿರಿಯ ಪತ್ರಿಕಾ ಪ್ರತಿನಿಧಿ ಗಣಪತಿ ಪಂಡಿತ್, ಟಿವಿ ವರದಿಗಾರ್ತಿ ಶೈಲಜಾ ಗೊರ್ನಮನೆ, ‘ಶ್ರೀಧರ ಸಂದೇಶ’ದ ಸಂಪಾದಕ ಗಜಾನನ ಭಟ್ಟ ರೇವಣಕಟ್ಟಾ ಮತ್ತು ಲೇಖಕ ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ನಾರದ ಪುರಸ್ಕಾರ ನೀಡಲಾಯಿತು.
ಇದನ್ನೂ ಓದಿ:
ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ‘ಕಾರಣಗಿರಿ ಕಲಾದರ್ಶನ’ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಭಾರತಿ ಟ್ರಸ್ಟ್ನ ಅಧ್ಯಕ್ಷ ಹನಿಯ ರವಿ ಉಪಸ್ಥಿತರಿದ್ದರು.



