ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರುವ ವಿಷಯವನ್ನು ಇರುವಂತೆ ಹೇಳೋದಕ್ಕೆ ಕಷ್ಟಪಡುವ ಮಿಲೇನಿಯಲ್‌ಗಳ ನಡುವೆ ಜೆನ್ ಝಿ ಇದ್ದದ್ದನ್ನು ಇದ್ದಂತೆಯೇ ಹೇಳೋಕೆ ಸ್ವಲ್ಪವೂ ಹಿಂಜರಿಯೋದಿಲ್ಲ. ಇದಕ್ಕೆ ನಿದರ್ಶನದಂತರ ವಿಡಿಯೋವೊಂದು ವೈರಲ್ ಆಗಿದೆ.
ಮನೆಯಿಂದ ಕೆಲಸ ಮಾಡುವ ವೇಳೆ ಜೆನ್ ಝಿ ಯುವತಿಯೊಬ್ಬರು ಮುಖಕ್ಕೆ ಫೇಸ್‌ಪ್ಯಾಕ್ ಹಾಕಿಕೊಂಡು ಮೀಟಿಂಗ್‌ಗೆ ಹಾಜರಾಗಿದ್ದಾರೆ. ಮಿಲೇನಿಯಲ್‌ಗಳು ಯಾವ ಕಾರಣಕ್ಕೂ ಈ ರೀತಿ ಮಾಡುವಷ್ಟು ಧೈರ್ಯ ಹೊಂದಿಲ್ಲ. ಮನೆಯಲ್ಲಿ ಫೇಸ್‌ಪ್ಯಾಕ್ ಹಾಕಿಕೊಂಡಿದ್ದರೂ ಮೀಟಿಂಗ್ ಸಮಯ ಬರುತ್ತಿದ್ದಂತೆಯೇ ಎದ್ದು ಮುಖ ತೊಳೆದುಬಿಡುತ್ತಾರೆ. ಇಲ್ಲವೋ ಮೀಟಿಂಗ್ ಮುಗಿಯುವವರೆಗೂ ಕಾದು ನಂತರ ಫೇಸ್‌ಪ್ಯಾಕ್ ಹಾಕುತ್ತಾರೆ. ಆದರೆ ಜೆನ್ ಝಿಗಳು ಯಾವುದಕ್ಕೂ ಹೆದರುವ ಜಾಯಮಾನದವರಲ್ಲ.
https://www.instagram.com/reel/DblQaeLT6fD/?utm_source=ig_embed&ig_rid=ATViWyM9e8GGgmGjobNQcfr
ವಿಡಿಯೋದಲ್ಲೇನಿದೆ?
ಆನ್‌ಲೈನ್ ಮೀಟಿಂಗ್‌ನ್ನು ಮ್ಯಾನೇಜರ್ ಆಯೋಜಿಸಿರುತ್ತಾರೆ. ನಾಲ್ಕು ಜನದ ಮೀಟಿಂಗ್ ಇದಾಗಿದ್ದು, ಮ್ಯಾನೇಜರ್ ಜೆನ್ ಝಿ ಯುವತಿಗೆ ತಮ್ಮ ಕ್ಯಾಮರಾ ಆನ್ ಮಾಡಿಕೊಳ್ಳುವಂತೆ ಹೇಳುತ್ತಾರೆ. ಪ್ಲೀಸ್ ಕ್ಯಾಮರಾ ಆನ್ ಮಾಡಿಕೊಳ್ಳಿ, ಕೆಲಸದ ಬಗ್ಗೆ ಮಾತನಾಡೋಕೆ ಇದೆ ಎಂದು ಮಧ್ಯವಯಸ್ಕ ಮ್ಯಾನೇಜರ್ ಹೇಳುತ್ತಾರೆ. ಆಗ ಜೆನ್ ಝಿ ಯುವತಿ ಕ್ಯಾಮರಾ ಆನ್ ಮಾಡುತ್ತಾಳೆ. ಮುಖಕ್ಕೆ ಫೇಸ್‌ಪ್ಯಾಕ್ ಹಾಕಿರುವುದು ಕಾಣಿಸುತ್ತದೆ.
ತಕ್ಷಣವೇ ಗರಂ ಆದ ಮ್ಯಾನೇಜರ್ ʼ ಇದನ್ನೆಲ್ಲಾ ಲಂಚ್ ಟೈಮ್‌ನಲ್ಲಿ ಮಾಡೋಕಾಗೋದಿಲ್ವಾ?ʼ ಎಂದು ಕೇಳುತ್ತಾರೆ. ತಕ್ಷಣವೇ ಪಟಾಕಿಯಂತೆ ʼ ನೀವು ಕೊಡುವ ಹದಿನೈದು ನಿಮಿಷದ ಲಂಚ್ ಬ್ರೇಕ್‌ನಲ್ಲಿ ನನ್ನ ಫೇಸ್‌ಪ್ಯಾಕ್ ಕೂಡ ಒಣಗಿರೋದಿಲ್ಲʼ ಎಂದು ತಮಾಷೆಯಾಗಿ ಉತ್ತರಿಸುತ್ತಾಳೆ. ಇದಕ್ಕೆ ಉತ್ತರ ಕೊಡಲಾಗದೇ ಮ್ಯಾನೇಜರ್ ಸುಮ್ಮನಾಗುತ್ತಾರೆ. ಆಗ ಯುವತಿ ಈಗಲಾದರೂ ಕ್ಯಾಮರಾ ಆಫ್ ಮಾಡ್ಲಾ? ಎಂದು ಕೇಳಿದ್ದಾರೆ.
ತರತರಹದ ಕಮೆಂಟ್ಸ್
ಈ ವಿಡಿಯೋಗೆ ತರತರಹದ ಕಮೆಂಟ್ಸ್ ಬಂದಿದೆ. ಕೆಲವರು ಮನೆಯುಲ್ಲಿ ಕೆಲಸ ಮಾಡುವ ವೇಳೆ ಇದೆಲ್ಲಾ ಮಾಮೂಲಿ, ಜೆನ್ ಝಿಯ ಮಾತಿಗೆ ಮಾತು ಕೊಡೋದಕ್ಕೆ ಆಗೋದಿಲ್ಲ ಎಂದು ಹೇಳ್ತಿದ್ರೆ ಆಫೀಸ್‌ಗೆ ಜೆನ್ ಝಿ ಗೌರವ ಕೊಡೋದಿಲ್ಲ. ಇದು ಮೀಟಿಂಗ್ ಅಟೆಂಡ್ ಮಾಡುವ ರೀತಿ ಅಲ್ಲ ಎಂದಿದ್ದಾರೆ.



