August 5, 2026
Wednesday, August 5, 2026
spot_img

ಸಚಿವ ಸ್ಥಾನಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಕಾರ್ಯಕರ್ತರ ಪಂಜಿನ ಮೆರವಣಿಗೆ

ಹೊಸದಿಗಂತ ವರದಿ ಬೆಳಗಾವಿ: ​

ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆಯ ಪ್ರತಿಭಟನೆ ನಡೆಸಿದರು.

ಪಂಜಿನ ಮೆರವಣಿಗೆ

ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿರೇಬಾಗೇವಾಡಿಯ ಬಸವೇಶ್ವರ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಸಾಗಿತು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಇದನ್ನೂ ಓದಿ:

ಹೆಬ್ಬಾಳ್ಕರ್ ಪರ ಅಡಿವೇಶ ಇಟಗಿ ಬ್ಯಾಟಿಂಗ್

ಇದೇ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಡಿವೇಶ ಇಟಗಿ, “ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅನುಭವ, ಜನಪರ ಕಾರ್ಯ ಹಾಗೂ ಪಕ್ಷದ ಮೇಲಿನ ನಿಷ್ಠೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತವಾಗಿದೆ. ರಾಜ್ಯದ ಜನರ ಆಶಯವನ್ನು ಕಾಂಗ್ರೆಸ್ ಹೈಕಮಾಂಡ್ ಗೌರವಿಸಿ ಶೀಘ್ರದಲ್ಲೇ ಅವರಿಗೆ ಸಚಿವ ಸ್ಥಾನ ಘೋಷಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿದ್ದಪ್ಪ ಸಿಂಗಾಡಿ, ರಘು ಪಾಟೀಲ, ಮನ್ಸೂರ್ ಅಲಿ ಅತ್ತಾರ, ಅನಿಲ್ ಕರಲಿಂಗಣ್ಣವರ, ಸಿದ್ದಪ್ಪ ಚಾಪಗಾಂವಿ, ಅಡಿವೆಪ್ಪ ತೋಟಗಿ, ರವಿ ಗಣಗಿ, ಮುಶ್ಯಾಪ ಉಪ್ಪಾರ, ರಾಜು ಉಪ್ಪಾರ, ನೀಲಕಂಠ, ಆಂಜನೇಯ ಗೌಸ್ ಜಾಲಿಕೊಪ್ಪ, ರಮೇಶ್ ವಾಲಿ, ರಶೀದ್ ಸಾಹೇದ್, ಬಸವರಾಜ್ ಇಟಗಿ, ಆನಂದ್ ಪಾಟೀಲ್, ಸುರೇಶ್ ಗೊಂಡ್ಲೂರು, ಚನ್ನಪ್ಪ ಹುದಲಿ, ನೀಲಕಂಠ ಪರವತಿ, ಬಸವರಾಜ್ ಯಾದವಾಡ, ಮಹೇಶ್ ಗುಂಡ್ಲೂರು ಸೇರಿದಂತೆ ಹಲವುಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಸಚಿವ ಸ್ಥಾನ ನೀಡುವಂತೆ ಸಿಎಂ‌ ಡಿಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !