August 6, 2026
Thursday, August 6, 2026
spot_img

ಮದ್ಯದ ಅಮಲಿನಲ್ಲಿ ಮನೆಯೊಳಗೆ ನುಗ್ಗೋಕೆ ಪ್ರಯತ್ನಿಸಿ, ನಂಬರ್‌ ಕೊಡಿ ಎಂದು ಹಿಂಸೆಕೊಟ್ಟ ಡೆಲಿವರಿ ಬಾಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾಕೆಟ್ ಡೆಲಿವರಿ ಮಾಡಲು ಬಂದ ಸಿಬ್ಬಂದಿಯೊಬ್ಬರು ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆದಿದೆ.

ಅನೇರಿ ಠಕ್ಕರ್‌ ಎನ್ನುವ ಯುವತಿಗೆ ಆಕೆಯ ಸ್ನೇಹಿತೆ ಜಾಕೆಟ್‌ ಒಂದನ್ನು ಬುಕ್‌ ಮಾಡಿದ್ದಾಳೆ. ಅದನ್ನು ಡೆಲಿವರಿ ಮಾಡಲು ಬಂದಿದ್ದ ಸಿಬ್ಬಂದಿ ಮದ್ಯದ ಅಮಲಿನಲ್ಲಿ ಗಾಡಿ ಓಡಿಸಿಕೊಂಡು ಬಂದು, ಮನೆಗೆ ನುಗ್ಗಲು ಯತ್ನಿಸಿ, ಅಸಭ್ಯವಾಗಿ ವರ್ತಿಸಿದ್ದಾರೆಂದು ಯುವತಿ ದೂರಿದ್ದಾಳೆ.

ವಿಡಿಯೋ ವೈರಲ್‌

ಬೇರೆ ಯಾವುದೋ ಊರಿನಿಂದ ಬೆಂಗಳೂರನ್ನು ನಂಬಿಕೊಂಡು ಬಂದಿರುತ್ತೇವೆ, ನಮ್ಮ ಮನೆಯಲ್ಲೇ ನಾವು ಸೇಫ್‌ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹರಿಬಿಟ್ಟಿದ್ದಾಳೆ.

ನನ್ನ ಸ್ನೇಹಿತ ಆರ್ಡರ್‌ ಮಾಡಿದ ಜಾಕೆಟ್‌ ತಂದ ಡೆಲಿವರಿ ಬಾಯ್‌ಗೆ ಬಾಗಿಲು ತೆಗೆದೆ. ಆತ ಕುಡಿದುಕೊಂಡು ಬಂದಿದ್ದ. ಪಾರ್ಸಲ್‌ ಕೊಟ್ಟ ನಂತರವೂ ಮನೆ ಮುಂದೆಯೇ ನಿಂತಿದ್ದ. ಕೆಲಸ ಆಯಿತಲ್ಲ ಹೋಗಿ ಎಂದು ಹೇಳಿದೆ. ಅದಕ್ಕೆ ನನ್ನ ಫೋನ್‌ನಲ್ಲಿ ಚಾರ್ಜ್‌ ಇಲ್ಲ ನಿಮ್ಮ ಮನೆಯಲ್ಲಿ ಫೋನ್‌ ಚಾರ್ಜ್‌ಗೆ ಹಾಕಬಹುದಾ ಎಂದು ಕೇಳಿದ. ನಾನು ಒಪ್ಪಿಗೆ ನೀಡುವ ಮುನ್ನವೇ ಆತನೇ ಮನೆಯೊಳಕ್ಕೆ ನುಗ್ಗಿ ಚಾರ್ಜ್‌ ಹಾಕಲು ಯತ್ನಿಸಿದ ಎಂದಿದ್ದಾರೆ.

ಬಾಲ್ಕನಿಯಲ್ಲಿ ಸಿಗರೇಟ್‌ ಸೇದಬಹುದಾ?

ತುಂಬಾ ಸಮಯ ಆಯ್ತು ಸಿಗರೇಟ್‌ ಸೇದಿಲ್ಲ. ನಿಮ್ಮ ಮನೆಯಲ್ಲಿ ಬಾಲ್ಕನಿ ಇದೆ, ಅಲ್ಲಿ ನಿಂತುಕೊಂಡು ಸಿಗರೇಟ್‌ ಸೇದಿ ಹೋಗ್ತೀನಿ ಎಂದಿದ್ದಾನೆ. ಅದಕ್ಕೆ ಯುವತಿ ನಿರಾಕರಿಸಿದ್ದಾಳೆ. ಆಗ ಸರಿ ಹಾಗಿದ್ರೆ ನಾನು ಕೆಳಗೆ ಹೋಗಿ ಸಿಗರೇಟ್‌ ಸೇದಿಕೊಂಡು ಬರುತ್ತೇನೆ. ಅಲ್ಲಿಯವರೆಗೂ ನಿಮ್ಮ ಮನೆಯಲ್ಲೇ ಚಾರ್ಜ್‌ ಹಾಕಿಕೊಳ್ಳಿ ಎಂದು ಮತ್ತೆ ನುಗ್ಗಲು ಯತ್ನಿಸಿದ್ದಾನೆ. ಮಹಿಳೆ ಆಗೋದಿಲ್ಲ ಎಂದು ಜೋರಾಗಿ ಕೂಗಿದ್ದಾಳೆ. ಅಟ್ಲೀಸ್ಟ್ ನಿಮ್ಮ ನಂಬರ್‌ ಆದ್ರೂ ಕೊಡಿ ಎಂದು ಆತ ಹಿಂಸೆ ನೀಡಿದ್ದಾನೆ ಎಂದು ಯುವತಿ ದೂರಿದ್ದಾಳೆ.

ಸರಿಯಾದ ಸಮಯಕ್ಕೆ ಸೆಕ್ಯುರಿಟಿಗೆ ಕಾಲ್‌

ಅಪಾಯವನ್ನರಿತ ಯುವತಿ ತಕ್ಷಣ ಸೆಕ್ಯುರಿಟಿಗೆ ಕರೆ ಮಾಡಿದ್ದಾಳೆ. ಡೆಲಿವರಿ ಬಾಯ್‌ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದಿದ್ದಾಳೆ. ಆಗ ಸೆಕ್ಯುರಿಟಿ ಬಂದು ಆತನನ್ನು ಹೋಗುವಂತೆ ಹೇಳಿದ್ದಾರೆ. ಆದರೂ ಅಲ್ಲಾಡದೇ ನಿಂತು ನಿಮ್ಮ ನಂಬರ್‌ ಕೊಡಿ ಹೋಗ್ತೀನಿ ಎಂದು ಪಟ್ಟು ಹಿಡಿದಿದ್ದಾನೆ. ಕೆಲ ಸಮಯದ ನಂತರ ಸೆಕ್ಯುರಿಟಿ ಆತನನ್ನು ಹೊರಕ್ಕೆ ಕಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !