ಈ ಹಿಂದೆ ನಾವು ನೀವೆಲ್ಲಾ ಮಕ್ಕಳಿದ್ದಾಗ ಎಷ್ಟೆಲ್ಲಾ ವಿಭಿನ್ನವಾದ ಸೊಪ್ಪುಗಳನ್ನು ತಿನ್ನುತ್ತಿದ್ದೆವು. ಆ ರುಚಿ ಇದೀಗ ಮತ್ತೆ ಬರೋಕೆ ಸಾಧ್ಯವೇ ಇಲ್ಲ. ಸಿಟಿಯ ಲೈಫ್‌ನಿಂದಾಗಿ ಅಂದುಕೊಂಡ ತರಕಾರಿ ಅಥವಾ ಸೊಪ್ಪುಗಳು ನಮಗೆ ಸಿಗೋದಿಲ್ಲ. ಎಲ್ಲಾದ್ರೂ ಮಾರ್ಕೆಟ್‌ನಲ್ಲಿ ಕೆಂಪು ಹರಿವೆ ಸೊಪ್ಪು ಕಾಣಿಸಿದ್ರೆ ಮಿಸ್ ಮಾಡದೇ ತನ್ನಿ. ಯಾಕಂದ್ರೆ ಒಂದು ಸಿಂಪಲ್ ಆದ್ರೂ ಬ್ಯೂಟಿಫುಲ್ ಆದಂತಹ ರೆಸಿಪಿಯನ್ನು ನಾವು ತಂದಿದ್ದೇವೆ..

ಸಾಮಾಗ್ರಿಗಳು:
ಕೆಂಪು ಹರಿವೆ ಸೊಪ್ಪು, ಹಸಿಮೆಣಸು,ಉಪ್ಪು, ಹುಣಸೆಹುಳಿ, ಕಾಯಿ, ಒಣಮೆಣಸು, ಕೊತ್ತಂಬರಿ ಕಾಳು, ಅಕ್ಕಿ, ಎಣ್ಣೆ, ಸಾಸಿವೆ, ಜೀರಿಗೆ
ಮಾಡುವ ವಿಧಾನ
ಈ ಕೆಂಪು ಹರಿವೆ ಸೊಪ್ಪಿನ ಹಸಿ ಹುಳಿ ಮಾಡೋದು ತುಂಬಾನೇ ಸುಲಭ. ಮೊದಲು ಸೊಪ್ಪನ್ನು ಚೆನ್ನಾಗಿ ತೊಳೆದು, ಹೆಚ್ಚಿ ಒಂದು ಪಾತ್ರೆಗೆ ಹಾಕಿ, ಸ್ವಲ್ಪ ನೀರು, ಉಪ್ಪು ಹಾಗೂ ಹಸಿಮೆಣಸನ್ನು ಹಾಕಿ ಕುದಿಯಲು ಬಿಡಿ, ಜೊತೆಗೆ ಹುಣಸೆರಸ ಸೇರಿಸಿ ಮಿಕ್ಸ್ ಮಾಡಿ. ಆನಂತರ ಮಿಕ್ಸಿಯ ಜಾರ್‌ಗೆ ಕಾಯಿತುರಿ, ಕೊತ್ತಂಬರಿ ಕಾಳು, ಅರ್ಧ ಸ್ಪೂನ್ ಅಕ್ಕಿ, ಒಣಮೆಣಸನ್ನು ಹಾಕಿ ರುಬ್ಬಿ ಇಡಿ. ರುಬ್ಬಿದ ಮಸಾಲೆಯನ್ನು ಸೊಪ್ಪಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕನ್ಸಿಸ್ಟೆನ್ಸಿಗೆ ತಕ್ಕಷ್ಟು ನೀರನ್ನು ಹಾಕಿ. ಆನಂತರ ಒಂದು ಕುದಿ ಬಂದ ಮೇಲೆ ಒಗರಣೆ ಕೊಟ್ಟರೆ ಹಸಿ ಗೊಜ್ಜು ರೆಡಿ. ಒಮ್ಮೆ ಬಿಸಿ ಅನ್ನದ ಜೊತೆ ತಿಂದುನೋಡಿ, ಇದು ನಿಮ್ಮ ಫೇವರೆಟ್ ಆಗದೇ ಇರೋಕೆ ಚಾನ್ಸೇ ಇಲ್ಲ.
ಹರಿವೆ ಸೊಪ್ಪನ್ನು ತಿಂದ್ರೆ ಏನಿದೆ ಲಾಭ?
ಈ ಸೊಪ್ಪಿನಲ್ಲಿ ಹೆಚ್ಚು ಕಬ್ಬಿಣಾಂಶ ಇರುವ ಕಾರಣ ರಕ್ತದ ಉತ್ಪಾದನೆಗೆ ಸಹಾಯ ಮಾಡುತ್ತದೆ. ನಿಮ್ಮ ಮೂಳೆಗಳು ಗಟ್ಟಿಯಾಗೋಕೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಎ,ಸಿ ಕೂಡ ಇದೆ.



