September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 51 | ಆರೋಗ್ಯಕ್ಕೆ ಬೆಸ್ಟ್, ರುಚಿಗೆ ನಂ.1.. ಬೆಳಗಿನ ತಿಂಡಿಗೆ ಮಾಡಿ ‘ಮಲ್ಟಿಗ್ರೇನ್’ ದೋಸೆ!

ಬೆಳಗಿನ ಉಪಹಾರವು ನಮ್ಮ ಇಡೀ ದಿನದ ಶಕ್ತಿ ಮತ್ತು ಹುರುಪನ್ನು ನಿರ್ಧರಿಸುತ್ತದೆ. ಪ್ರತಿದಿನ ಒಂದೇ ರೀತಿಯ ದೋಸೆ ಅಥವಾ ಇಡ್ಲಿ ತಿಂದು ಬೇಸರವಾಗಿದ್ದರೆ, ಆರೋಗ್ಯಕ್ಕೆ ಅತ್ಯಂತ ಹಿತಕರವಾದ ಮಲ್ಟಿಗ್ರೇನ್ ದೋಸೆ ಅತ್ಯುತ್ತಮ ಪರ್ಯಾಯವಾಗಿದೆ.

ಬೇಕಾಗುವ ಪದಾರ್ಥಗಳು

  • ಅಕ್ಕಿ: 1 ಕಪ್
  • ರಾಗಿ: 1/2 ಕಪ್
  • ಸಜ್ಜೆ ಕಾಳು: 1/2 ಕಪ್
  • ಕಡಲೆ ಬೇಳೆ: 1/4 ಕಪ್
  • ಉದ್ದಿನ ಬೇಳೆ: 1/2 ಕಪ್
  • ಹೆಸರು ಬೇಳೆ: 1/4 ಕಪ್
  • ಮೆಂತ್ಯ ಕಾಳು: 1 ಟೀಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ, ರಾಗಿ, ಸಜ್ಜೆ, ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಮತ್ತು ಮೆಂತ್ಯವನ್ನು ಸೇರಿಸಿ ಚೆನ್ನಾಗಿ ತೊಳೆಯಿರಿ. ನಂತರ ನೀರು ಹಾಕಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಪದಾರ್ಥಗಳನ್ನು ನೀರು ಬಸೇರಿ, ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.

ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ 7-8 ಗಂಟೆಗಳ ಕಾಲ (ಅಥವಾ ರಾತ್ರಿಯಿಡೀ) ಮುಚ್ಚಿಡಿ. ಬೆಳಿಗ್ಗೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ತೆಳುವಾಗಿ ದೋಸೆಯಂತೆ ಹರಡಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಕಾಯಿಸಿದರೆ ರುಚಿಯಾದ ಮಲ್ಟಿಗ್ರೇನ್ ದೋಸೆ ಸಿದ್ಧ!

    Must Read