ಬೆಳಗಿನ ಉಪಹಾರವು ನಮ್ಮ ಇಡೀ ದಿನದ ಶಕ್ತಿ ಮತ್ತು ಹುರುಪನ್ನು ನಿರ್ಧರಿಸುತ್ತದೆ. ಪ್ರತಿದಿನ ಒಂದೇ ರೀತಿಯ ದೋಸೆ ಅಥವಾ ಇಡ್ಲಿ ತಿಂದು ಬೇಸರವಾಗಿದ್ದರೆ, ಆರೋಗ್ಯಕ್ಕೆ ಅತ್ಯಂತ ಹಿತಕರವಾದ ಮಲ್ಟಿಗ್ರೇನ್ ದೋಸೆ ಅತ್ಯುತ್ತಮ ಪರ್ಯಾಯವಾಗಿದೆ.

ಬೇಕಾಗುವ ಪದಾರ್ಥಗಳು
- ಅಕ್ಕಿ: 1 ಕಪ್
- ರಾಗಿ: 1/2 ಕಪ್
- ಸಜ್ಜೆ ಕಾಳು: 1/2 ಕಪ್
- ಕಡಲೆ ಬೇಳೆ: 1/4 ಕಪ್
- ಉದ್ದಿನ ಬೇಳೆ: 1/2 ಕಪ್
- ಹೆಸರು ಬೇಳೆ: 1/4 ಕಪ್
- ಮೆಂತ್ಯ ಕಾಳು: 1 ಟೀಚಮಚ
- ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ, ರಾಗಿ, ಸಜ್ಜೆ, ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಮತ್ತು ಮೆಂತ್ಯವನ್ನು ಸೇರಿಸಿ ಚೆನ್ನಾಗಿ ತೊಳೆಯಿರಿ. ನಂತರ ನೀರು ಹಾಕಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಪದಾರ್ಥಗಳನ್ನು ನೀರು ಬಸೇರಿ, ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ 7-8 ಗಂಟೆಗಳ ಕಾಲ (ಅಥವಾ ರಾತ್ರಿಯಿಡೀ) ಮುಚ್ಚಿಡಿ. ಬೆಳಿಗ್ಗೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ತೆಳುವಾಗಿ ದೋಸೆಯಂತೆ ಹರಡಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಕಾಯಿಸಿದರೆ ರುಚಿಯಾದ ಮಲ್ಟಿಗ್ರೇನ್ ದೋಸೆ ಸಿದ್ಧ!



