August 7, 2026
Friday, August 7, 2026
spot_img

ಇಳುವರಿ ತೀವ್ರ ಕುಂಠಿತವಾಗಿರುವ ಬಗ್ಗೆ ಸಿಎಂಗೆ ಮಾಹಿತಿ ರವಾನೆ: ಸಚಿವ ಡಾ. ಅಜಯ ಧರ್ಮಸಿಂಗ್

ಹೊಸದಿಗಂತ ವರದಿ ರಾಯಚೂರು :

ಮುಂಗಾರು ಮಳೆಯ ತೀರ್ವ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ವಾಡಿಕೆಯಂತೆ ಬೆಳವಣಿಗೆ ಕಾಣದೆ ಇಳುವರಿ ತೀರ್ವ ಕುಠಿತವಾಗಿರುವು ಕಂಡುಬಂದಿದೆ. ಈ ಕುರಿತು ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಬರಗಾಲ ಅಧ್ಯಯನ ಉಸ್ತುವಾರಿ ಹಾಗೂ ಸಚಿವ ಡಾ. ಅಜಯ ಧರ್ಮಸಿಂಗ್ ಹೇಳಿದರು.

ಶುಕ್ರವಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರಗಾಲ ಅಧ್ಯಯನ ಕೈಗೊಂಡಿದ್ದು ಮೊಲನೆ ದಿನ ರಾಯಚೂರು ನಗರ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಬರಗಾಲದ ಪರಿಣಾಮಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಗರ ಕ್ಷೇತ್ರ ವ್ಯಾಪ್ತಿಯ ಯಾಕ್ಲಾಸಪೂರ ಗ್ರಮಾದ ಎರಡು ಹತ್ತಿ ಹಾಗೂ ಒಂದು ತೊಗರಿ ಬೆಳೆ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಈ ಸಂದರ್ಭದಲ್ಲಿ ಮಾಡಿ ಹೊಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ರೈತರನ್ನು ಭೇಟಿ ಮಾಡಿ ಅವರ ಸಂಕಷ್ಟಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ರೈತ ಮಲ್ಲಿಕಾರ್ಜುನನ್ನು ಸಚಿವರು ಮಾತನಾಡಿಸಿದ ಸಂದರ್ಭದಲ್ಲಿ, ಜೂನ್ ಮಧ್ಯ ಭಾಗದಲ್ಲಿ ಮೊದಲ ಭಾರಿಗೆ ಹತ್ತಿಯ ಕಾಳನ್ನು ಹಾಕಲಾಗಿತ್ತು. ಮಳೆ ಬಾರದ ಹಿನ್ನಲೆಯಲ್ಲಿ ಅದು ಮೊಳಕೆ ಬರಲಿಲ್ಲ ನಂತರ ಜುಲೈ ಎರಡನೇ ವಾರದಲ್ಲಿ ಸ್ವಲ್ಪ ಮಳೆ ಆಗಿದ್ದರಿಂದ ಆ ಸಂದರ್ಭದಲ್ಲಿ ಬೀಜವನ್ನು ಹಾಕಲಾಯಿತು ಈ ಸಂದರ್ಭದಲ್ಲಿಯೂ ಕಾಳು ಮೊಳಕೆ ಬಂದರೂ ಸ್ವಲ್ಪೇ ದಿನದಲ್ಲಿ ಒಣಗಿತು. ಜುಲೈ ಅಂತ್ಯದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆ ಆದ ನಂತರ ಮತ್ತೆ ಹತ್ತಿ ಕಾಳನ್ನು ಹಾಕಿದ್ದೇವೆ. ಅದೀಗ 8-10 ಇಂಚು ಬೆಳೆದಿದೆ. ಮೊಲದ ಮಳೆಗೆ ಹುಟ್ಟಿದ್ದು 2-3 ಅಡಿ ಬೆಳೆದಿದೆ. ಹೀಗಾಗಿ ಬೆಳೆ ಪ್ರತಿ ವರ್ಷ ಇಳುವರಿಗೆ ಹೋಲಿಸಿದರೆ ಶೇ.10-15 ಭಗ ಬರಬಹುದು ಆದ್ದರಿಂದ ಸರ್ಕಾರ ಬರಗಾಲ ಎಂದು ಘೋಶಿಸಿ ಬೆಳೆ ಹಾನಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ಮಳೆಯಿಲ್ಲದೆ ಹಾಗೂ ನೀರಿನ ಅಭಾವದಿಂದ ನಾವು ಹಾಕಿರುವ ಬೆಳೆ ಒಣಗಿದೆ. ಕಷ್ಟಪಟ್ಟು ಬಿತ್ತನೆ ಮಾಡಿದ ನಮಗೆ ಫಸಲು ಕೈಗೆ ಸಿಕ್ಕಿಲ್ಲ. ಇದರಿಂದ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ನಮ್ಮ ನೆರವಿಗೆ ಸ್ಪಂದಿಸಬೇಕೆAದು ರೈತ ಮಹಿಳೆಯರು ಸಚಿವರಿಗೆ ಮನವಿ ಮಾಡಿದರು. ಸಚಿವ ಡಾ.ಅಜಯ ಧರ್ಮಸಿಂಗ್ ಮಾತನಾಡಿ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯಾದ್ಯಂತ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಲಾಗುತ್ತಿದೆ. ಮಳೆ, ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ ವರದಿ ಮಾಡಲಾಗುತ್ತದೆ. ವರದಿ ಸಲ್ಲಿಸಿದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರದ ಕ್ರಮಗಳನ್ನು ವಹಿಸಲಿದೆ. ರೈತರ ಎಲ್ಲ ಸಂಕಷ್ಟ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !