September 21, 2026
Monday, September 21, 2026
spot_img

ದಿಢೀರ್‌ ಬೆಂಗಳೂರಿನ ಹೊಟೇಲ್‌ಗಳಿಗೆ ಎಂಟ್ರಿ ಕೊಟ್ಟ ಫುಡ್‌ ಸೇಫ್ಟಿ ಆಫೀಸರ್ಸ್‌: 31 ಲೀಟರ್‌ ಎಕ್ಸ್‌ಪೈರಿ ಹಾಲು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಟೇಲ್‌ಗಳಲ್ಲಿ ಸುರಕ್ಷತೆ ಬಗ್ಗೆ ಸಾಕಷ್ಟು ದೂರು ಬಂದ ನಂತರ ಇಂದು ಫುಡ್‌ ಸೇಫ್ಟಿ ಆಫೀಸರ್‌ಗಳು ಪರಿಶೀಲನೆಗೆ ಮುಂದಾಗಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಹೊಟೇಲ್‌ಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪ್ರಸಿದ್ಧ ಹೊಟೇಲ್‌ಗಳ ಅಡುಗೆ ಮನೆ ಮೇಲೆ ಆಫೀಸರ್ಸ್‌ ರೈಡ್‌ ಮಾಡಿದ್ದು, ಅವಧಿ ಮೀರಿದ 31 ಲೀಟರ್ ಹಾಲು ಪತ್ತೆಯಾಗಿದೆ.

ಹೊಟೇಲ್‌ಗಳ ವಿರುದ್ಧ ಕಠಿಣ ಕ್ರಮ

ಹೊಟೇಲ್‌ನಲ್ಲಿ ತಯಾರಿಸುವ ಆಹಾರಗಳ ಕಚ್ಛಾ ವಸ್ತುಗಳು ಹೇಗಿವೆ, ಅದರ ಕ್ವಾಲಿಟಿ ಹೇಗಿದೆ ಎಂದು ತಿಳಿದುಕೊಳ್ಳಲು ಆಫೀಸರ್‌ಗಳು ಸೀದ ಅಡುಗೆ ಮನೆಗೆ ತೆರಳಿದ್ದಾರೆ. ಈ ವೇಳೆ ಅವಧಿ ಮೀರಿದ ಹಾಲಿನ ಪ್ಯಾಕೆಟ್‌ಗಳು ಕಾಣಿಸಿವೆ. ರಾಜ್ಯಾದ್ಯಂತ ಹೋಟೆಲ್‌ಗಳ ಆಹಾರ ಸುರಕ್ಷತೆ ಬಗ್ಗೆ ಪರಿಶೀಲನೆ ಮುಂದುವರಿಯಲಿದ್ದು, ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಹೊಟೇಲ್‌ಗಳನ್ನು ಶುಚಿಯಾಗಿ ಇಟ್ಟುಕೊಳ್ಳಿ

ಹೊಟೇಲ್‌ಗಳಲ್ಲಿ ಶುಚಿ ಅನ್ನೋದೇ ಇಲ್ಲ ಎಂದು ನೂರಾರು ದೂರುಗಳು ಬಂದಿದ್ದು, ಫುಡ್‌ ಸೇಫ್ಟಿ ಆಫೀಸರ್‌ಗಳು ರಾಜ್ಯದ ಯಾವ ಜಿಲ್ಲೆಯ ಯಾವುದೇ ಹೊಟೇಲ್‌ಗಳಿಗೆ ಭೇಟಿ ನೀಡಬಹುದು. ನಿತ್ಯವೂ ಅಡುಗೆ ಮನೆಯನ್ನು ಕ್ಲೀನ್‌ ಆಗಿ ಇಟ್ಟುಕೊಳ್ಳುವುದು, ತರಕಾರಿಗಳನ್ನು ತೊಳೆದು ಬಳಕೆ ಮಾಡುವುದು ಹಾಗೂ ಉತ್ತಮ ಬ್ರ್ಯಾಂಡ್‌ನ ಪದಾರ್ಥಗಳನ್ನು ಅಡುಗೆಗೆ ಬಳಸುವುದು ಮುಖ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !