August 10, 2026
Monday, August 10, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 54 | ಒಂದೇ ರೀತಿ ಬೆಂಡೇಕಾಯಿ ಪಲ್ಯ ತಿಂದು ಬೋರ್‌ ಆಗಿದ್ರೆ ಈ ಮಸಾಲಾ ಬೆಂಡೇಕಾಯಿ ಪಲ್ಯ ಟ್ರೈ ಮಾಡಿ

ಹಲವರಿಗೆ ಬೆಂಡೇಕಾಯಿ ಫೇವರೆಟ್‌ ಹಾಗೇ ಕೆಲವು ಮಂದಿಗೆ ಮಾತ್ರ ಬೆಂಡೇಕಾಯಿ ಇಷ್ಟವೇ ಆಗೋದಿಲ್ಲ. ಅದರ ಲೋಳೆಯಿಂದಾಗಿ ಪಲ್ಯ ಇಷ್ಟವಾಗೋದಿಲ್ಲ ಎಂದು ಹೇಳ್ತಾರೆ. ಆದರೆ ಸರಿಯಾದ ವಿಧಾನದಲ್ಲಿ ಅಡುಗೆ ಮಾಡಿದರೆ ಲೋಳೆಯೂ ಬರೋದಿಲ್ಲ, ರುಚಿಯೂ ಅದ್ಭುತವಾಗಿರುತ್ತದೆ. ರೊಟ್ಟಿ, ಚಪಾತಿ ಹಾಗೂ ದೋಸೆಗೆ ಬೆಸ್ಟ್‌ ಆಗಿರುವ ಬೆಂಡೇಕಾಯಿಯ ಗ್ರೇವಿ ಮಾಡೋದು ಹೀಗೆ ನೋಡಿ..

ಸಾಮಾಗ್ರಿಗಳು : ಬೆಂಡೇಕಾಯಿ, ಈರುಳ್ಳಿ, ಟೊಮ್ಯಾಟೊ, ಖಾರದಪುಡಿ, ಸಾಂಬಾರ್‌ ಪುಡಿ, ಬೆಳ್ಳುಳ್ಳಿ, ಜೀರಿಗೆ, ಶುಂಠಿ, ಕೊತ್ತಂಬರಿ ಸೊಪ್ಪು, ಎಣ್ಣೆ, ಕಡ್ಲೆಬೇಳೆ, ಉಪ್ಪು

ಮಾಡುವ ವಿಧಾನ

ಮೊದಲು ಒಂದು ದೊಡ್ಡ ಬಾಣಲೆ ಇಟ್ಟು, ಬೆಂಡೇಕಾಯಿಯನ್ನು ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಎಣ್ಣೆ ಹಾಕಿ, ಇನ್ನೂ ಲೋಳೆ ಹೋಗಿಲ್ಲ ಎಂದಾದರೆ ಒಂದೆರಡು ಸ್ಪೂನ್‌ ಮೊಸರು ಹಾಕಿ ಮಿಕ್ಸ್‌ ಮಾಡಿ

ನಂತರ ಅದನ್ನು ಬದಿಗೆ ತಟ್ಟೆಗೆ ಹಾಕಿ ಇಡಿ. ಆನಂತರ ಮತ್ತೆ ಅದೇ ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಜೀರಿಗೆ ಕಡ್ಲೆಬೇಳೆ, ಕರಿಬೇವು ಹಾಕಿ ಮಿಕ್ಸ್‌ ಮಾಡಿ. ಆನಂತರ ಈರುಳ್ಳಿ ಹಾಕಿ ಬಾಡಿಸಿ

ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ. ನಂತರ ಹುರಿದು ಬೆಂಡೇಕಾಯಿಯನ್ನು ಹಾಕಿ, ಉಪ್ಪು ಹಾಕಿ ಸ್ವಲ್ಪ ಸಮಯ ಬೇಯಿಸಿ

ಇತ್ತ ಮಿಕ್ಸಿಗೆ ತೆಂಗಿನಕಾಯಿ, ಶುಂಠಿ, ಕೊತ್ತಂಬರಿ, ಬೆಳ್ಳುಳ್ಳಿ, ಜೀರಿಗೆ, ಖಾರದಪುಡಿ, ಸಾಂಬಾರ್‌ ಪುಡಿ ಹಾಕಿ ರುಬ್ಬಿ ಇಡಿ.

ಈ ಮಸಾಲೆಯನ್ನು ಬೆಂಡೇಕಾಯಿಗೆ ಹಾಕಿ ಮಿಕ್ಸ್‌ ಮಾಡಿ, ನಂತರ ಬೇಯಿಸಿ, ನೀರು ಹಾಕಿರಿ, ಕುದಿ ಬಂದ ನಂತರ ಹದ ಚೆಕ್‌ ಮಾಡಿ ಆಫ್‌ ಮಾಡಿದ್ರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !